ದೇಶದಲ್ಲಿ 2,95,041 ಕೊರೊನಾ ಸೋಂಕಿತರು ಪತ್ತೆ-ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆ…

116
Firstsuddi

ನವದಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,95,041 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಕೊರೊನಾ ಸೋಂಕಿನಿಂದ 2,023 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 1,82,553ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 1,56,16,130 ಮಂದಿ ಸೋಂಕಿತರ ಪೈಕಿ ಈವರೆಗೆ 1,32,76,039 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಎಂದು ಕುಟುಂಬ ಮತ್ತು ಕಲ್ಯಾಣ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.