ದೇಶದಲ್ಲಿ 3,48,421 ಕೊರೊನಾ ಸೋಂಕಿತರು ಪತ್ತೆ-ಸೋಂಕಿತರ ಸಂಖ್ಯೆ 2,33,40,938ಕ್ಕೆ ಏರಿಕೆ…

90
firstsuddi

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,48,421 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,33,40,938ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಕೊರೊನಾ ಸೋಂಕಿನಿಂದ 4,205 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 2,54,197ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 2,33,40,938 ಮಂದಿ ಸೋಂಕಿತರ ಪೈಕಿ ಈವರೆಗೆ 1,93,82,642 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕುಟುಂಬ ಮತ್ತು ಕಲ್ಯಾಣ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.