ನವದೆಹಲಿ : ಇಂದು ಶ್ರೀ ರಾಮ ನವಮಿ ಜನ್ಮದಿನ. ಈ ಹಿನ್ನೆಲೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದೇಶದ ಜನತೆಗೆ ರಾಮ ನವಮಿ ಶುಭಾಶಯಗಳು. ಶ್ರೀ ರಾಮನ ಆಶೀರ್ವಾದ ಯಾವಾಗಲೂ ಭಾರತ ದೇಶದ ಜನತೆಯ ಮೇಲೆ ಇರಲಿ ಎಂದು ಅವರು ಆಶಿಸಿದ್ದಾರೆ. ಹಾಗೆಯೇ ಜನರು ಸೋಂಕು ತಡೆಗಟ್ಟಲು ಔಷಧಿ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಪ್ರಧಾನಿ ಮೋದಿಯವರು ಮನವಿ ಮಾಡಿಕೊಂಡಿದ್ದಾರೆ.
रामनवमी की मंगलकामनाएं। देशवासियों पर भगवान श्रीराम की असीम अनुकंपा सदा बनी रहे। जय श्रीराम!
— Narendra Modi (@narendramodi) April 21, 2021










