ನವದೆಹಲಿ : ದೇಶದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಗೆ ಝಡ್ ಭದ್ರತೆ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಗೌತಮ್ ಅದಾನಿಗೆ ಬೆದರಿಕೆಗಳು ಹೆಚ್ಚಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಗೌತಮ್ ಅದಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆಗಳು ತೀವ್ರವಾಗಿವೆ. ಇನ್ನಷ್ಟು ಸುರಕ್ಷತೆಗಾಗಿ “ಝಡ್ ಕೆಟಗರಿ” ಭದ್ರತೆ ಒದಗಿಸಬೇಕು ಎಂದು ಗುಪ್ತಚರ ದಳ ನೀಡಿದ ವರದಿಯ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಗುಪ್ತಚರ ದಳದಿಂದ ಬಂದಿರುವ ಮಾಹಿತಿಯ ಆಧಾರದ ಮೇಲೆ, ಅದಾನಿಗೆ ಸರ್ಕಾರವು ಉನ್ನತ ಮಟ್ಟದ ಭದ್ರತೆಯನ್ನು ಒದಗಿಸಿದೆ. ಅದಕ್ಕಾಗಿ ಇಡೀ ವೆಚ್ಚವನ್ನು ಅವರೇ ಭರಿಸಲಿದ್ದಾರೆ.










