ಉಡುಪಿ : ರಾಜ್ಯದಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಿಜಾಬ್ ಪರ ಹೋರಾಟಗಾರ್ತಿಯರು ಗೈರಾಗಿದ್ದಾರೆ.
ಇಂದು ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರಿಗೆ ಗಣಿತ ಪರೀಕ್ಷೆ ಇತ್ತು. ಈ ಪೈಕಿ ಅಲ್ಮಾಸ್ ನಿನ್ನೆ ಕಾಲೇಜಿಗೆ ಬಂದು ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿದ್ದರು. ಇನ್ನೂಳಿದಂತೆ ಹಜ್ರಾ, ಆಯೆಶಾ ಹಾಲ್ ಟಿಕೆಟ್ ನ್ನು ತೆಗೆದುಕೊಳ್ಳಲು ಬಂದಿರಲಿಲ್ಲ. ಅಲ್ಮಾಸ್ ಪ್ರವೇಶ ಪತ್ರ ಪಡೆದರೂ ಪರೀಕ್ಷೆಗೆ ಬಂದಿಲ್ಲ. ಇನ್ನಿಬ್ಬರು ವಿದ್ಯಾರ್ಥಿನಿಯರು ಸಹ ಪರೀಕ್ಷೆಗೆ ಗೈರಾಗಿದ್ದಾರೆ.
ಇನ್ನೂ ನಿನ್ನೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಆಲಿಯಾ ಅಸಾದಿ ಮತ್ತು ರೇಷಂ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಾಗಿ ಹಠ ಮಾಡಿದ್ದರು. ಆದರೆ ಪರೀಕ್ಷಾ ಕೇಂದ್ರದ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದಿಂದ ಇಬ್ಬರು ಹೊರ ನಡೆದಿದ್ದರು.










