ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ, ಸಾಮಾಜಿಕ ಸ್ಥಿತಿಗತಿಗೆ ತಕ್ಕಂತೆ ಬದಲಾವಣೆ ಆಗಬೇಕು: ಪ್ರಿಯಾಂಕ್ ಖರ್ಗೆ.

45
firstsuddi

ಬೆಂಗಳೂರು: ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರ ಭಾರೀ ಚರ್ಚೆಯ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಸ್ಥಿತಿಗಳ ತಕ್ಕಂತೆ ಬದಲಾವಣೆ ಆಗಬೇಕು. ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ. ಕುತೂಹಲ ಇಲ್ಲ ಅಂದರೆ ಕಲಿಕೆ ಬರಲ್ಲ. ಕಲಿಗೆ ಬರಲ್ಲ ಅಂದರೆ ಜ್ಞಾನ ಬರಲ್ಲ. ಸಮಾಜದಲ್ಲಿ ಪ್ರಬುದ್ಧತೆ ಇರಲ್ಲ. ಪ್ರಬುದ್ಧ ಭಾರತ, ಪ್ರಬುದ್ಧ ಸಮಾಜ ಕಟ್ಟಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದು ಬೆಳೆಯಬೇಕು ಅಂದ್ರೆ ಪ್ರಶ್ನೆ ಮಾಡಲೇಬೇಕು ಅಲ್ವಾ ಎಂದು ಹೇಳಿದರು.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಅದಕ್ಕೆ ಪ್ರಶ್ನೆ ಕೇಳುವುದು ಮುಖ್ಯ. ಎಲ್ಲದಕ್ಕೂ ಉತ್ತರ ಸಿಗಲ್ಲ, ಪ್ರಶ್ನೆ ಮಾಡಿದ್ರೆ ವೈಜ್ಞಾನಿಕ ಮನೋಭಾವ ಬೆಳೆಯುತ್ತೆ. ಶಿಕ್ಷಕರಿಗೆ ಹೊಸ ರೂಪದಲ್ಲಿ ಕಲಿಕೆ ಆಗುತ್ತೆ ಎಂದರು.

ನಾಲೆಡ್ಜ್ ಬೇಸ್ ಸೊಸೈಟಿ ಕ್ರಿಯೆಟ್ ಮಾಡುತ್ತಿದ್ದೇವೆ. ವಿಶ್ವಗುರು ಆಗಬೇಕು ಅಂದ್ರೆ ನಾಲೆಡ್ಜ್ ಅಗ್ರಸ್ಥಾನ ನೀಡಬೇಕು. ಹಾಸ್ಟೆಲ್ ಗಳು ಎಲ್ಲ ವಸತಿ ಶಾಲೆಗಳು ಜ್ಞಾನ ಕೇಂದ್ರವಾಗಬೇಕು. ಆಗ ಪ್ರಬುದ್ಧ ಮತ್ತು ಸಮೃದ್ಧ ಭಾರತ ಕಟ್ಟಬಹುದು ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ನಡೆದಿದ್ದೇನು..?; ರಾಜ್ಯದ ಹಲವು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬರಹವನ್ನು ಮತ್ತೆ ಬದಲಾವಣೆ ಮಾಡಲಾಗುತ್ತಿದೆ.