ನಜರೆತ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ, ಪೋಷಕರು ಮಕ್ಕಳನ್ನು ಆಸ್ತಿಯನ್ನಾಗಿ ಬೆಳೆಸಿ.

42

ಕೊಟ್ಟಿಗೆಹಾರ:ಪೋಷಕರು ಮಕ್ಕಳಿಗೆ ಶಿಸ್ತು,ಸಂಸ್ಕಾರ ಕಲಿಸಿ ಅವರನ್ನು ಆಸ್ತಿಯನ್ನಾಗಿ ಬೆಳೆಸಿ ಎಂದು ನರಸಿಂಹರಾಜಪುರ ಸಂತ ಜೋಸೆಫ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮೋಹನ್ ಕೆ.ಹೇಳಿದರು.

ಅವರು ತಾಲ್ಲೂಕಿನ ಬಣಕಲ್ ನಜರೆತ್ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳು ಮೊಬೈಲ್ ವ್ಯಾಮೋಹದಿಂದ ಕುಟುಂಬದ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದಾರೆ.ಹಿರಿಯರಿಗೆ ಗೌರವ ಕೊಡುವ ಜೊತೆಗೆ ಅವರನ್ನು ದೈವಿಕವಾಗಿ ಬೆಳೆಸಬೇಕು.ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಕ್ರೀಡಾಳುಗಳಾಗಿ ಬೆಳೆಯಲು ಪೋಷಕರು ಉತ್ತೇಜನ ನೀಡಬೇಕು.ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ನಾಂದಿಯಾಗುತ್ತದೆ.ಕ್ರೀಡೆಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ.ಮಕ್ಕಳಿಗೆ ಮೊಬೈಲ್ ಬಳಕೆ ಕಡಿಮೆ ಮಾಡಿ ಎಲ್ಲರೊಂದಿಗೆ ಬೆರೆತು ಸಮಾಜದಲ್ಲಿ ಗೌರವಯುತ ನಾಗರೀಕರಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕು. ಮಕ್ಕಳು ಭಾವನೆಯೇ ಇಲ್ಲದ ರೀತಿಯಲ್ಲಿ ಬೆಳೆಯುತ್ತಿದ್ದಾರೆ.ಅವರಿಗೆ ಶಿಸ್ತು ಸಂಸ್ಕಾರ ಕಲಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ’ಎಂದರು.

ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿ ‘ಕ್ರೀಡೆಗಳು ಮಾನವನ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಾಯಕವಾಗಿದೆ.ಶ್ರಮ ಹಾಗೂ ಶೃದ್ದೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾಗಿ ಶಾಲೆಗೂ ಪೋಷಕರಿಗೂ ಕೀರ್ತಿ ತರಬೇಕು’ಎಂದರು.
ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ.ಅರುಣ್ ಲೋಬೊ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ದಿಶಾ ಗೌಡ, ಬಾಲಕರ ವಿಭಾಗದಲ್ಲಿ ಮೊಹಮ್ಮದ್ ಅಂಫಾಲ್ ಹಾಗೂ 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಧೃತಿ ಎಸ್. ಜಿ, ಬಾಲಕರ ವಿಭಾಗದಲ್ಲಿ ಅನುಜ್ ಕೆ. ಆರ್. ಚಾಂಪಿಯನ್ ಆಗಿ ಹೊರಹೊಮ್ಮಿದರು.
.ಕ್ರೀಡಾಕೂಟದ ಜೊತೆಗೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಶಾಲೆಯ ಲವಕುಮಾರ್ ಕ್ರೀಡಾಕೂಟ ನಿರ್ವಹಿಸಿದರು.ಸಮಾರಂಭದಲ್ಲಿ ಶಿಕ್ಷಕಿಯರಾದ ಸಿಸ್ಟರ್ ಜೆನ್ಸಿ, ರೇಖಾ, ಅಬಿದ, ನಸ್ರಿನ್, ವಿನುತಾ ಸೆರಾವೊ, ರುಕ್ಷವಿ, ಅನುಷಾ, ಫೆಲ್ಸಿ ಫೆರ್ನಾಂಡಿಸ್, ಪ್ರೆಸಿಲ್ಲಾ ಮೋನಿಸ್, ಸಾಂಘವಿ, ಅನುಶ್ರೀ, ನಾಗಶ್ರೀ, ಯಾಸ್ಮಿನ್ ಬಿ ಎ, ಸೌಜನ್ಯ ಮೇರಿ, ವರ್ಷ ಪೈ, ಸಾಂಚಿತ, ರಜನಿ, ಲಿನ್ಸಿ ಚಾಕೋ, ರೇಷ್ಮಾ ಪಲ್ಲೇರಾ, ಯಾಸ್ಮಿನ್, ಹಲೀಮಾ, ಸೆವ್ರಿನ್, ಹಿಮಂಷಿ, ರಜತ್, ವಿಜಿತ್, ಮೋಹನ್ ಲಾಲ್, ಟ್ರೀಸಾ ಡಿಮೆಲ್ಲೊ, ನಿಶ್ಮಿತಾ, ಶಾಂತಿ, ರೀಟಾ ಉಪಸ್ಥಿತರಿದ್ದರು.