ನಟ ದುನಿಯಾ ವಿಜಯ್ ತಂದೆ ನಿಧನ…

82
firstsuddi

ಬೆಂಗಳೂರು : ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ಅವರು ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 7.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ವಿಜಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಪನ ಫೋಟೋ ಹಾಕಿ ‘ಮಿಸ್ ಯೂ ಅಪ್ಪ’ ಎಂದು ಬರೆದುಕೊಂಡಿದ್ದಾರೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ವಿಜಯ್ ತಂದೆಯ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಜುಲೈನಲ್ಲಿ ವಿಜಯ್ ರ ತಾಯಿ ನಾರಾಯಣಮ್ಮ ನಿಧನರಾಗಿದ್ದರು.