ಪೊಲೀಸ್ ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ 4 ಲಕ್ಷ ರೂ. ವಂಚನೆ…

70
firstsuddi

ಹುಬ್ಬಳ್ಳಿ : ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 4,15,000 ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಗದಗ ರಸ್ತೆಯ ಲೈದಿಯಾ ಜೆಸ್ಸಿ ಎಂಬ ಮಹಿಳೆಗೆ ನಕಲಿ ಐಡಿ ತೋರಿಸಿ ಪರಿಚಯ ಮಾಡಿಕೊಂಡಿದ್ದ ಕ್ರಿಶ್ಚಿನಾ ಗೋಟಿಮುಕ್ಕಲು ಎಂಬಾಕೆ ನನಗೆ ಪೊಲೀಸ್ ಇಲಾಖೆಯಲ್ಲಿರುವ ಮೈಸೂರಿನ ಅಧಿಕಾರಿಗಳ ಪರಿಚಯವಿದೆ ನಿಮಗೆ ಕಾನ್ಸ್ಟೇಬಲ್ ಉದ್ಯೋಗ ಕೊಡಿಸುತ್ತೇನೆ ಎಂದು ಕ್ರಿಶ್ಚಿನಾ ನಂಬಿಸಿದ್ದಳು.

ಉದ್ಯೋಗ ಕೊಡಿಸಲು ಲೈದಿಯಾ ಬಳಿ ಕ್ರಿಶ್ಚಿನಾ ಹಣದ ಬೇಡಿಕೆ ಇಟ್ಟಿದ್ದಾಳೆ. ಹುದ್ದೆಯ ಆಸೆಗಾಗಿ ಲೈದಿಯಾ ತನ್ನ ಪತಿಯ ಫೋನ್ ಪೇ ಮೂಲಕ ಹಂತ ಹಂತವಾಗಿ 4,15,000 ಲಕ್ಷ ರೂಪಾಯಿ ಹಣವನ್ನು ಕ್ರಿಶ್ಚಿನಾಗೆ ನೀಡಿದ್ದಾರೆ. ಈ ವೇಳೆ ಕ್ರಿಶ್ಚಿನಾ ನಕಲಿ ಆರ್ಡರ್ ಕಾಪಿಯೊಂದನ್ನು ನೀಡಿದ್ದಾರೆ. ಆರ್ಡರ್ ಕಾಫಿ ಪಡೆದ ಬಳಿಕ ಅನುಮಾನ ಬಂದು ಪರಿಶೀಲಿಸಿದಾಗ ಪ್ರಮಾಣ ಪತ್ರ ನಕಲಿ ಎಂದು ಗೊತ್ತಾಗಿದೆ. ವಂಚನೆಗೊಳಗಾದ ಲೈದಿಯಾ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಶ್ಚಿನಾ ವಿರುದ್ಧ ವಂಚನೆ ದೂರು ದಾಖಲಿಸಿದ್ದಾರೆ.