ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಎಂಬುದು ಬಹುದೊಡ್ಡ ಸಾಧನ : ಪ್ರಧಾನಿ ಮೋದಿ.

71
firstsuddi

ನವದೆಹಲಿ : ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಎಂಬುದು ಬಹುದೊಡ್ಡ ಸಾಧನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘ಸಿಡ್ನಿ ಡೈಲಾಗ್’ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪಿಎಂ ಮೋದಿ ಅವರು, ಪ್ರಗತಿ ಮತ್ತು ಸಮೃದ್ಧಿಯ ಅವಕಾಶಗಳ ಹೊಸ ಯುಗಕ್ಕೆ ಜಗತ್ತು ನಾಂದಿ ಹಾಡಿದೆ. ತಂತ್ರಜ್ಞಾನವು ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ. ‘ಡಿಜಿಟಲ್ ಯುಗ’ದಲ್ಲಿ ತಂತ್ರಜ್ಞಾನ ಮತ್ತು ಡೇಟಾ ಹೊಸ ಅಸ್ತ್ರಗಳಾಗುತ್ತಿವೆ. ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದರೆ ಮುಕ್ತವಾಗಿರುವುದು. ಪಟ್ಟಭದ್ರ ಹಿತಾಸಕ್ತಿಗಳಿಗೆ ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅನುಮತಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ. ರಾಷ್ಟ್ರೀಯ ಹಕ್ಕುಗಳನ್ನು ಗುರುತಿಸುವ ಮೂಲಕ ವ್ಯಾಪಾರ, ಹೂಡಿಕೆ ಮತ್ತು ದೊಡ್ಡ ಸಾರ್ವಜನಿಕ ಒಳಿತನ್ನು ಉತ್ತೇಜಿಸಬೇಕು ಎಂದು ಹೇಳಿದ ಮೋದಿ, ನಾವು ಆಡಳಿತದಲ್ಲಿ ಅಂದರೆ ಸಬಲೀಕರಣ, ಸಂಪರ್ಕ, ಫಲಾನುಭವಿಗಳಿಗೆ ಅಗತ್ಯ ಯೋಜನೆಗಳ ನೀಡುವಿಕೆ ಮತ್ತು ಜನರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಮೂಲಕ ಜನರ ಜೀವನವನ್ನು ಪರಿವರ್ತನೆ ಮಾಡುತ್ತಿದ್ದೇವೆ ಎಂದೂ ತಿಳಿಸಿದರು.