ಚಿತ್ರದುರ್ಗ : ನದಿಗೆ ಕಾಲುಜಾರಿ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಬ್ಯಾರೇಜ್ ಬಳಿ ನಡೆದಿದೆ. ಮೃತ ಮಗುವನ್ನು ನಿಸರ್ಗ(2) ಎಂದು ಗುರುತಿಸಲಾಗಿದೆ. ಮೃತ ಮಗು ಬಹಿರ್ದೆಸೆಗೆಂದು ವೇದಾವತಿ ನದಿ ಬಳಿ ತೆರಳಿದ್ದು, ಈ ವೇಳೆ ಮಗು ಕಾಲುಜಾರಿಗೆ ನದಿಗೆ ಬಿದ್ದಿದೆ. ಬಳಿಕ ಮಗುವನ್ನು ರಕ್ಷಿಸಲು ತಾಯಿ ರಾಧಿಕಾ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ತಾಯಿಯನ್ನು ರಕ್ಷಿಸಿದ್ದು, ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










