ಕೀವ್ : ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ತೀವ್ರಗೊಳ್ಳುತ್ತಿದ್ದು, ಕೀವ್ ತೊರೆಯುವಂತೆ ಅಮೆರಿಕ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಸಲಹೆ ನೀಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ತಿರಸ್ಕರಿಸಿದ್ದಾರೆ.
ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನಿನ್ನೆಯಷ್ಟೇ ವಿಡಿಯೋವೊಂದರಲ್ಲಿ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಅನ್ನು ಪ್ರವೇಶಿಸಿವೆ. ಮತ್ತೊಂದೆಡೆ ಏನೇ ಆದರೂ ತಾವು ಕೀವ್ ನಲ್ಲೇ ಉಳಿಯುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದರು.










