ನನ್ನನ್ನು ಟಾರ್ಗೆಟ್ ಮಾಡೋಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿದ್ದಾರೆ : ಸುಮಲತಾ ವಿರುದ್ಧ ಪುಟ್ಟರಾಜು ಪರೋಕ್ಷವಾಗಿ ಆಕ್ರೋಶ…

85
firstsuddi

ಮೈಸೂರು : ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಶಾಸಕ ಸಿ.ಎಸ್ ಪುಟ್ಟರಾಜು ಆಕ್ರೋಶ ಹೊರಹಾಕಿದ್ದಾರೆ.

ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1983ರಲ್ಲೇ ನಾನು ಸಕ್ರಿಯವಾಗಿ ರಾಜಕೀಯಕ್ಕೆ ಬಂದವನು. ಗಣಿಗಾರಿಕೆ ವಿಚಾರದಲ್ಲಿ ಯಾರೇ ಅಕ್ರಮ ಮಾಡಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ. ಆದರೆ ಸಕ್ರಮ ಇರುವ ಕ್ರಷರ್ ಗಳನ್ನು ಅಭಿವೃದ್ಧಿ ದೃಷ್ಟಿಯಿಂದ ಆರಂಭಿಸಬೇಕು. ಈ ಬಗ್ಗೆ ದಿಶಾ ಮೀಟಿಂಗ್ ನಲ್ಲಿ ಚರ್ಚೆ ಮಾಡಿದ್ದೇವೆ. ಅಕ್ರಮ ಗಣಿಗಾರಿಕೆ ಎಂದು ಎರಡು ತಿಂಗಳಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕಾನೂನು ಚೌಕಟ್ಟಿನಲ್ಲೇ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ನನ್ನ 37 ವರ್ಷದ ರಾಜಕೀಯ ಜೀವನದ ಎದುರಾಳಿಗಳು ಈಗ ನಮ್ಮ ಮುಂದೆ ಇಲ್ಲ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಬಂದವರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ನನಗೆ ಬುದ್ದಿ ಹೇಳಿ ಸರಿ ದಾರಿ ತೋರಿದವರೂ ಇದ್ದಾರೆ, ಖ್ಯಾತೆ ತೆಗೆದು ಕಣ್ಮರೆಯಾದವರೂ ಇದ್ದಾರೆ ಆಕ್ರೋಶ ಹೊರಹಾಕಿದ್ದಾರೆ.