ನನ್ನ ಆದ್ಯತೆ ಕೋವಿಡ್ ನಿಯಂತ್ರಿಸುವುದು, ಬೇರೆ ಕಡೆ ನನ್ನ ಗಮನ ಇಲ್ಲ : ಸಿಎಂ ಬಿಎಸ್ ವೈ.

123
firstsuddi

ಬೆಂಗಳೂರು : ನಾಯಕತ್ವ ಬದಲಾವಣೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದು, ಈ ಬಗ್ಗೆ ಪ್ರತಿಕ್ರಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರು, ನನ್ನ ಆದ್ಯತೆ ಕೋವಿಡ್ ನಿಯಂತ್ರಿಸುವುದು, ಬೇರೆ ಕಡೆ ನನ್ನ ಗಮನ ಇಲ್ಲ ಎಂದು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾಗಿ ಸಚಿವರು, ಶಾಸಕರು ಕೋವಿಡ್ ಸಮಸ್ಯೆಯನ್ನು ಎದುರಿಸಬೇಕು. ದೆಹಲಿಗೆ ಹೋಗಿ ಬಂದವರಿಗೆ ಈಗಾಗಲೇ ಉತ್ತರ ಸಿಕ್ಕಿದೆ. ಜನ ಹಿತ ಕಾಪಾಡುವುದು ನನ್ನ ಆದ್ಯತೆ. ಕೋವಿಡ್ ಎದುರಿಸುವುದು ಮೊದಲ ಕೆಲಸ. ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ ಎಂದರು.

ಶಾಸಕಾಂಗ ಪಕ್ಷದ ಸಭೆ ನಡೆಸುವ ವಿಚಾರದ ಬಗ್ಗೆ ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಭೆ ಬಗ್ಗೆ ನಿಮ್ಮ ಜತೆ ಚರ್ಚಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು.