ನಮ್ಮ ಸೇನೆ ಮೋದಿಯವರ ವೈಯಕ್ತಿಕ ಆಸ್ತಿಯಲ್ಲ : ರಾಹುಲ್ ಗಾಂಧಿ…

200
firstsuddi

ನವದೆಹಲಿ : ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಮಂತ್ರಿ ಯಾರಾಗಬೇಕೆಂದು ದೇಶದ ಜನತೆ ತೀರ್ಮಾನಿಸುತ್ತಾರೆ. ಇಡೀ ದೇಶ ಮೋದಿಯವರ ಬಗ್ಗೆ ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಿ ಎಂದು ಕೇಳುತ್ತಿದೆ. ಆದರೆ ಮೋದಿಯವರ ಬಳಿ ಉದ್ಯೋಗ ಸೃಷ್ಟಿಯ ಬಗ್ಗೆ ಯೋಜನೆಗಳೇ ಇಲ್ಲ ಎಂದು ಹೇಳಿದ್ದು, ಸರ್ಜಿಕಲ್ ಸ್ಟ್ರೈಕ್ ನಮ್ಮ ಸೇನೆ ಮಾಡಿರುವುದು, ಬಿಜೆಪಿ ಅಲ್ಲ. ನಮ್ಮ ಸರ್ಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಆದರೆ ನಾವು ಅದನ್ನು ರಾಜಾಕೀಯದಲ್ಲಿ ಬಳಸಿಕೊಂಡಿಲ್ಲ. ನಮ್ಮ ಸೇನೆ ಮೋದಿಯವರ ವೈಯಕ್ತಿಕ ಆಸ್ತಿಯಲ್ಲ. ಇದುವರೆಗೆ ನಡೆದ ಮತದಾನದಲ್ಲಿ ನರೇಂದ್ರ ಮೋದಿಯವರಿಗೆ ಸೋಲು ಖಚಿತ. ಮೋದಿಯವರು ಚುನಾವಣೆಗೂ ಮೊದಲು ಒಂದಾದರೂ ಸುದ್ದಿಗೋಷ್ಟಿಯನ್ನು ನಡೆಸಲಿ ಎಂದು ಮೋದಿಯವರಿಗೆ ಸವಾಲೊಡ್ಡಿದ್ದು, ರಫೇಲ್ ಡೀಲ್‍ನಲ್ಲಿ 30ಸಾವಿರ ಕೋಟಿ ಲೂಟಿಯಾಗಿದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರದ ಬಗ್ಗೆ ನರೇಂದ್ರ ಮೋದಿಯವರು 5ರಿಂದ 10ನಿಮಿಷ ನನ್ನ ಬಳಿ ಚರ್ಚಿಸಲಿ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಚೌಕೀದಾರ್ ಚೋರ್ ಹೈ ಎಂದು ಒಪ್ಪಿಕೊಂಡಿದೆ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ರಾಹುಲ್ ಗಾಂಧಿ ಅವರು ಸುಪ್ರೀಂ ಕೋರ್ಟ್ ವಿರುದ್ಧ ಪ್ರತಿಕ್ರಯಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ನಾನು ನನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದೇನೆ ಆದರೂ ನಾನು ಚೌಕೀದಾರ್ ಚೋರ್ ಹೈ ಎಂದು ಹೇಳುತ್ತೇನೆ. ಕೇಂದ್ರ ಚುನಾವಣಾ ಆಯೋಗದಿಂದ ಆಡಳಿತ ಹಾಗೂ ಪ್ರತಿಪಕ್ಷಗಳ ಪರ ಪಕ್ಷಪಾತ ಧೋರಣೆಯಾಗಿದೆ. ಸಾಂವಿಧಾನಿಕ ಸಂಸ್ಥೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ಕಿಡಿ ಕಾರಿದ್ದಾರೆ.