ಸದ್ಯದಲ್ಲೇ ವಿವಾಹವಾಗಲಿರುವ ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಾಮೂರ್ತಿ…

245
firstsuddi

ಬೆಂಗಳೂರು : ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಾಮೂರ್ತಿ ಅವರು ಸದ್ಯದಲ್ಲೇ ವಿವಾಹವಾಗಲಿದ್ದಾರೆ ಎಂದು ತಮ್ಮ ಫೇಸ್‍ಬುಕ್‍ನಲ್ಲಿ ಫೋಸ್ಟ್ ಮಾಡಿದ್ದಾರೆ. ವೇದಾ ಕೃಷ್ಣಮೂರ್ತಿ ವಿವಾಹವಾಗುತ್ತಿರುವ ಯುವಕ ಲಲಿತ್ ಚೌಧರಿ ಅವರ ಜೊತೆ ಇರುವ ಫೋಟೋವನ್ನು ಫೋಸ್ಟ್ ಮಾಡಿದ್ದು, ವಿವಾಹ ದಿನಾಂಕವನ್ನು ಕುರಿತು ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ವೇದಾ ಕೃಷ್ಣಮೂರ್ತಿ ಅವರು ಟೀಂ ಇಂಡಿಯಾ ಪರ 48 ಏಕದಿನ ಪಂದ್ಯವನ್ನು ಆಡಿದ್ದು, 8 ಅರ್ಧ ಶತಕ ಹಾಗೂ 829 ರನ್ ಗಳಿಸಿದ್ದಾರೆ. ಟಿ20 ಪಂದ್ಯದಲ್ಲಿ 59 ಪಂದ್ಯಗಳನ್ನು ಆಡಿ 686 ರನ್ ಗಳಿಸಿದ್ದಾರೆ.