ನವದೆಹಲಿ: ಕೋವಿಡ್-19 ಲಸಿಕೆ ಪಡೆದ ನಂತರ 10 ಮಂದಿ ಸಾವು…

102

ನವದೆಹಲಿ: ಭಾರತದಲ್ಲಿ ಕೋವಿಡ್-19 ಲಸಿಕೆ ಪಡೆದುಕೊಂಡ ನಂತರ ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಅದು ಲಸಿಕೆ ಪಡೆದುಕೊಂಡ 1 ರಿಂದ 5 ದಿನಗಳೊಳಗೆ, ಕರ್ನಾಟಕ, ಉತ್ತರ ಪ್ರದೇಶ, ರಾಜಸ್ತಾನ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ಒಡಿಶಾಗಳಲ್ಲಿ ವರದಿಯಾಗಿದ್ದು, ಮೃತಪಟ್ಟ 10 ಕೇಸುಗಳು ಕೂಡ ಲಸಿಕೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಜಿಲ್ಲಾ ಎಇಎಫ್ಐ ಸಮಿತಿಗಳು ಹೇಳುತ್ತಿವೆ.
ಕೋವಿಡ್-19 ಲಸಿಕೆ ಪಡೆದುಕೊಂಡ ನಂತರ ದೇಹದಲ್ಲಿ ವ್ಯತಿರಿಕ್ತ ಪರಿಣಾಮವುಂಟಾದುದರ ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ತಂಡವೊಂದು ಮುಂದಾಗಿದ್ದು, ತಕ್ಷಣಕ್ಕೆ ಇದು ಕೋವಿಡ್-19 ಲಸಿಕೆಯಿಂದ ಎಂದು ಕಂಡುಬಂದಿಲ್ಲ. ಆದರೆ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ರಾಷ್ಟ್ರೀಯ ಎಇಎಫ್ಐ ಸಮಿತಿಯ ಸಲಹೆಗಾರ ಎನ್ ಕೆ ಅರೊರ ತಿಳಿಸಿದ್ದಾರೆ.