ನಾನು ತಟಸ್ಥನಾಗಿ ಇರುತ್ತೇನೆಯೇ ಒರತು ಬಿಜೆಪಿಗೆ ಬೆಂಬಲ ನೀಡಲ್ಲ : ಎನ್. ಮಹೇಶ್…

264
firstsuddi

ಬೆಂಗಳೂರು : ಕೊಳ್ಳೆಗಾಲ ಕ್ಷೇತ್ರದ ಬಿಎಸ್‍ಪಿ ಶಾಸಕ ಎನ್. ಮಹೇಶ್ ಅವರನ್ನು ಮೈತ್ರಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಹಾಜರಾಗಿ ಮೈತ್ರಿ ಸರ್ಕಾರಕ್ಕೆ ಬೆಂಬಲಿಸುವಂತೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಟ್ವಿಟರ್ ಮೂಲಕ ತಿಳಿಸಿದ್ದರು. ಇದರ ಬಗ್ಗೆ ಮಾಹಿತಿ ಲಭಿಸದೇ ಎನ್. ಮಹೇಶ್ ಅವರು ವಿಶ್ವಾಸ ಮತಯಾಚನೆಗೆ ಹಾಜರಾಗದ ಹಿನ್ನೆಲೆ ಮಾಯಾವತಿ ಅವರು ಎನ್. ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು. ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಾಸಕ ಎನ್ ಮಹೇಶ್ ಅವರು, ವಿಶ್ವಾಸ ಮತಯಾಚನೆಗೆ ಹಾಜರಾಗಲಿಲ್ಲ ಎಂದು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ವಿಶ್ವಾಸ ಮತಯಾಚನೆ ವೇಳೆ ನನ್ನನ್ನು ಸ್ವತಂತ್ರವಾಗಿರುವಂತೆ ಮಾಯಾವತಿಯವರೇ ಹೇಳಿದ್ದರು. ಹೀಗಾಗಿ ನಾನು ಕ್ಷೇತ್ರದಿಂದ ಹೊರಗೆ ಇದ್ದೆ. ಹೊರಗಿದ್ದ ಕಾರಣ ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ನಾನು ಅವರ ಟ್ವೀಟ್‍ನ್ನು ಗಮನಿಸಲಿಲ್ಲ. ಲೋಕಸಭಾ ಚುನಾವಣಾ ಬಳಿಕ ರಾಜ್ಯ ಅತಂತ್ರ ಫಲಿತಾಂಶದಿಂದ ಜೆಡಿಎಸ್-ಕಾಂಗ್ರೆಸ್ ಹಾಗೂ ಬಿಎಸ್‍ಪಿ ಮೈತ್ರಿ ಮಾಡಿಕೊಂಡಿತ್ತು. ಆ ಸಂದರ್ಭದಲ್ಲಿ ನನಗೆ 4ತಿಂಗಳ ಕಾಲ ಸಚಿವ ಸ್ಥಾನ ನೀಡಿದ್ದರು. ಬಳಿಕ ರಾಷ್ಟ್ರಾಧ್ಯಕ್ಷರ ಆದೇಶದಂತೆ ನಾನು ರಾಜೀನಾಮೆ ನೀಡಿದ್ದೆ. ನಾನು ಪಕ್ಷದ ಸೂಚನೆಯಂತೆ ತಟಸ್ಥನಾಗಿದ್ದರು ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಪಕ್ಷದ ಸದಸ್ಯನಾಗಿಯೇ ಮುಂದುವರಿಯುತ್ತೇನೆ. ನನ್ನನ್ನು ಆಪರೇಷನ್ ಕಮಲಕ್ಕೆ ಗುರಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ತಟಸ್ಥನಾಗಿ ಇರುತ್ತೇನೆಯೇ ಒರತು ಬಿಜೆಪಿಗೆ ಬೆಂಬಲ ನೀಡಲ್ಲ ಎಂದು ಹೇಳಿದರು.