ನಾನು ಹಿಂದೂ ಅಂತ ಆದಿಲ್ ಮನೆಯವರು ನನ್ನನ್ನು ಸ್ವೀಕರಿಸುತ್ತಿಲ್ಲ : ಕಣ್ಣೀರಿಟ್ಟ ರಾಖಿ ಸಾವಂತ್.

63
firstsuddi

ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್ ನಟಿ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನನ್ನು ಒಳ್ಳೆಯ ಮಾತುಗಳಿಂದ ಮರಳು ಮಾಡಿ ಆತ ನನಗೆ ವಂಚಿಸಿದ್ದಾನೆ. ನನ್ನನ್ನು ಕಾನೂನು ಪ್ರಕಾರ ಮದುವೆಯಾಗಿ, ನನ್ನ ಬಳಿ ಇದ್ದ 1.65 ಕೋಟಿ ರೂ. ಹಣ ಪಡೆದಿದ್ದಾನೆ. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ ಎಂದರು.

ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಸಾಯಿಸಲು ಯತ್ನಿಸಿದ್ದ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು. ಆತನಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಆದಿಲ್ ಅವರ ತಂದೆ ನಾನು ಹಿಂದೂ ಎಂಬ ಕಾರಣಕ್ಕೆ ನನ್ನನ್ನು ಸ್ವೀಕರಿಸುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ರಾಖಿ ಗಳಗಳನೆ ಅತ್ತರು.

ರಾಖಿ ಸಾವಂತ್ ಅವರು ಮುಂಬೈನಲ್ಲಿ ವಂಚನೆ ಆರೋಪದಡಿ ಆದಿಲ್ ಖಾನ್ ದುರಾನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಮುಂಬೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ನಡುವೆ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಇರಾನ್ ದೇಶದ ವಿದ್ಯಾರ್ಥಿನಿಯೊಬ್ಬರು ತನ್ನನ್ನು ಆದಿಲ್ ಖಾನ್ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಂಧಿಯಾಗಿದ್ದ ಆದಿಲ್ ನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ಇಂದು ಮೈಸೂರಿಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಕೋರ್ಟ್ ಫೆ.27ರವರೆಗೆ 5 ದಿನಗಳ ಕಾಲ ಆದಿಲ್ ನನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.