ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ- ಮೂವರು ಸಾವು…

60
firstsuddi

ಬಳ್ಳಾರಿ: ನಿಂತಿದ್ದ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ಹೊಸ ದರೋಜಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯ 45 ವರ್ಷದ ವೆಂಕಟೇಶ್, 8 ವರ್ಷದ ಆಶಾ ಮತ್ತು 6 ವರ್ಷದ ಅಖಿಲಾ ಎಂದು ಗುರುತಿಸಲಾಗಿದೆ.

ಒಂದೇ ಬೈಕ್‌ನಲ್ಲಿ ಐದು ಜನರು ಪ್ರಯಾಣ ಮಾಡುತ್ತಿದ್ದು, ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಇನ್ನೂ ಘಟನೆಯಲ್ಲಿ ಸರಸ್ವತಿ(4) ಹಾಗೂ ಜಂಬಕ್ಕ ಎಂಬುವರಿಗೆ ಗಂಭೀರ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಕುಡತಿನಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.