ನಿಂಬೇಹಣ್ಣಿನ ಪಾನೀಯ ಮಾರಿ ಜೀವನ ಸಾಗಿಸುತ್ತಿದ್ದ ಮಹಿಳೆ ಇಂದು ಪೊಲೀಸ್ ಅಧಿಕಾರಿ..!

81
firstsuddi

ತಿರುವನಂತಪುರಂ : ನಿಂಬೇಹಣ್ಣಿನ ಪಾನೀಯ ಮಾರುತ್ತಿದ್ದ ಮಹಿಳೆ ಇದೀಗ ಕೇರಳದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. 12 ವರ್ಷಗಳ ಹಿಂದೆ ವಾರ್ಕಳ ಶಿವಗಿರಿ ಆಶ್ರಮದಲ್ಲಿ ನಿಂಬೇಹಣ್ಣಿನ ಜ್ಯೂಸ್, ಐಸ್ ಕ್ರೀಮ್ ಹಾಗೂ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಆನ್ಯಿ ಶಿವಾಳ ಅವರು ಈಗ ಎಸ್ ಐ ಅಧಿಕಾರಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತುಂಬಾ ಚಿಕ್ಕ ವಯಸ್ಸಿನವರಿದ್ದಾಗಲೇ ಆನ್ಯಿ ಶಿವಾಳ ಅವರಿಗೆ ಮದುವೆಯಾಗಿತ್ತು. 18 ವರ್ಷದವಳಾಗಿದ್ದಾಗ ಅವಳ ಕೈಗೊಂದು ಮಗುವನ್ನು ಕೊಟ್ಟು ಗಂಡನಾದವನು ಅವಳನ್ನು ನಡುಬೀದಿಯಲ್ಲಿ ಬಿಟ್ಟುಹೋಗಿದ್ದನು. ಆಗ ಜೀವನ ನಿರ್ವಹಣೆಗಾಗಿ ನಿಂಬೇಹಣ್ಣಿನ ಜ್ಯೂಸ್ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇದೇ ಮಹಿಳೆ 31 ವರ್ಷಕ್ಕೆ ತನ್ನ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ. ಈಗ ಕೇರಳದ ವೆರಕಾಲ್ ಪೊಲೀಸ್ ಠಾಣೆಯಲ್ಲಿ ಎಸ್ ಐ ಆಗಿದ್ದಾರೆ.

ಮಗನನ್ನು ಮಡಿಲಲ್ಲಿ ಹಿಡಿದು, ಕಾಣದ ಗುರಿಯತ್ತ ಹೆಜ್ಜೆಹಾಕುತ್ತಾ 12 ವರ್ಷ ಸಾಗಿ ಬಂದ ಆನ್ಯಿ ಶಿವಾಳ ಸಾಧನೆ ಇತತರಿಗೆ ಪ್ರೇರಣಾದಾಯಕ. ಇವರ ಸಾಧನೆ ಅಮೋಘ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.