ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು ಗೊತ್ತಾ?

97
firstsuddi

ಬೆಂಗಳೂರು : ಇಂದು ನಗರದ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಟ, ಯುವರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ಬೆಳಗ್ಗೆ 10:30ರಿಂದ 12:20ರವರ ನಡುವಿನ ಶುಭ ಲಗ್ನದಲ್ಲಿ ನಾಮಕರಣ ಮಾಡಲಾಗಿದೆ.

ನಿಖಿಲ್ ಪುತ್ರನಿಗೆ ಆವ್ಯನ್ ದೇವ್ ಎಂದು ಹೆಸರಿಡಲಾಗಿದೆ. ಆವ್ಯನ್ ದೇವ್ ಎಂದರೆ ಪರ್ಫೆಕ್ಟ್ ಎಂದು ಅರ್ಥವಂತೆ. ಸದ್ಯ ಮಗುವಿಗೆ 9 ತಿಂಗಳು ತುಂಬಿದೆ. 2020ರ ಏಪ್ರಿಲ್ ನಲ್ಲಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. 2021ರ ಸೆಪ್ಟೆಂಬರ್ 24ರಂದು ನಿಖಿಲ್, ರೇವತಿ ದಂಪತಿ ಪುತ್ರನನ್ನು ಬರಮಾಡಿಕೊಂಡಿದ್ದರು.

ಈ ಶುಭ ಕಾರ್ಯದ ವೇಳೆ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಭಿಷೇಕ ಕಾರ್ಯಕ್ರಮ ನಡೆದಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ.