ನಿಡುವಾಳೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ…

35

 ಕೊಟ್ಟಿಗೆಹಾರ: ಕನ್ನಡ ಸಾಹಿತ್ಯ ಪರಿಷತ್ ಬಾಳೂರು ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಾವಳಿ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಿಡುವಾಳೆ ಗ್ರಾಮ ಪಂಚಾಯಿತಿ  ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ನಡೆಯಿತು.ವೈದ್ಯರು ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ ಸೂಕ್ತ ರೋಗಿಗಳಿಗೆ ಕನ್ನಡಕ ಬಳಕೆಗೆ ಸೂಚಿಸಿ ಉಚಿತ ಕನ್ನಡಕ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಸಾಪ ಬಾಳೂರು ಘಟಕದ ಅಧ್ಯಕ್ಷ ಎಂ.ವಿ.ಸೋಮೇಶ್  ಕಾರ್ಯಕ್ರಮ ಉದ್ಘಾಟಿಸಿದರು.ಕಾಮಾಡಿ ಕಿಲಾಡಿ ಖ್ಯಾತಿಯ ರಮೇಶ್ ಯಾದವ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿ ಸುರೇಶ್,  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಕೆ. ಲಕ್ಷ್ಮಣ್ ಗೌಡ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅನನ್ಯ, ಮಾಜಿ ಕಸಾಪ ಅಧ್ಯಕ್ಷ ರವಿ ಪಟೇಲ್ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ  ರಮೇಶ್ ಯಾದವ್, ನವೀನ್ ಹಾವಳಿ,ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮೇಲ್ವಿಚಾರಕ ಸಂದೇಶ, ಪರೀಕ್ಷಿತ್ ಜಾವಳಿ,ಕೆ.ಸಿಹ ರಾಜೇಂದ್ರ, ಎಚ್.ಆರ್.ಚಂದ್ರಶೇಖರ್, ಸೋಮಶೇಖರ್ ಮರ್ಕಲ್, ಸಾಗರ್ ,ಅನಿತಾ,ಜ್ಯೋತಿ,ವಿಷನ್ ಸ್ಪ್ರಿಂಗ್ ಸಂಸ್ಥೆಯ ಮ್ಯಾನೇಜರ್ ಜೈಪಾಲ್,ಎ.ಎಸ್.ಮೋನಪ್ಪ ,ಡಿ.ಟಿ. ಉಮೇಶ್ ,ಬಿ.ಎಂ.ಸತೀಶ್ ಬಾಳೂರು, ಸಾಗರ್ ಮರ್ಕಲ್, ಬಿಎಸ್ ಚಂದ್ರು ಕೂವೆ,ಮತ್ತಿತರರು ಇದ್ದರು