ಕೊಟ್ಟಿಗೆಹಾರ: ನಿಡುವಾಳೆ ಗ್ರಾಮಸ್ಥರ ವತಿಯಿಂದ ಬಾಳೂರು ಹೋಬಳಿ ಮಟ್ಟದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ನಿಡುವಾಳೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಮನೆ ಎಸ್ಟೇಟ್ ಮಾಲೀಕರಾದ ಧೀರಜ್ ಪ್ರಭು ನೆರವೇರಿಸಿ ಮಾತನಾಡಿ ‘ಹಲವು ದಶಮಾನಗಳ ಹಿಂದಿನ ಕ್ರೀಡೆ, ಆಧುನಿಕತೆಯ ಭರಾಟೆಯಲ್ಲಿ ನಶಿಸುತ್ತಿದೆ. ಮಕ್ಕಳು ಹೊರಾಂಗಣದ ಆಟಗಳನ್ನು ಆಡದೇ ಅತಿಯಾದ ಮೊಬೈಲ್ ಬಳಕೆಯಿಂದ ಅಪಾಯದ ಮೊಬೈಲ್ ಗೇಮ್ಸ್ ಗಳನ್ನು ಆಡುವುದರ ಮೂಲಕ ತಲ್ಲೀನರಾಗಿದ್ದಾರೆ. ಒಟ್ಟಾಗಿ ಸೇರಿ ಮನೋರಂಜನೆ ನೀಡುವ ಆಟಗಳು ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ’ ಎಂದರು.
ಮುಖಂಡರಾದ ಬಿ.ಎಂ. ಭರತ್ ಮಾತನಾಡಿ ‘ಇಂದಿನ ಯುವಕರು ಹೆಚ್ಚೆಚ್ಚು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ಪ್ರೋತ್ಸಾಹಿಸುವ ಮೂಲಕ ಕೃಷಿ ಭೂಮಿಯತ್ತ ಒಲವು ಮೂಡಿಸುವ ಅಗತ್ಯವಿದೆ. ಕೆಸರುಗದ್ದೆಯಂತಹ ಕ್ರೀಡೆಗಳು ಮನೋರಂಜನೆ ಜೊತೆಗೆ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ’ ಎಂದರು.
ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ವಾಲಿಬಾಲ್, 100ಮೀ ಓಟ, ಮತ್ತಿತರ ಕ್ರೀಡೆಗಳನ್ನು ನಡೆಸಲಾಯಿತು. ಪುರುಷರ ಹಗ್ಗಜಗ್ಗಾಟದಲ್ಲಿ ಭಗತ್ ಸಿಂಗ್ ತಂಡ ಪ್ರಥಮವಾಗಿ ರೂ.5000 ನಗದು ಹಾಗೂ ಟೋಫಿ ಪಡೆದರು. ದ್ವಿತೀಯ ಬಹುಮಾನವನ್ನು ಗಬ್ಗಲ್ ತಂಡ ರೂ.3000 ನಗದು ಹಾಗೂ ಟೋಫಿ ಪಡೆದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಗಬ್ಗಲ್ ತಂಡ ರೂ.5000 ನಗದು ಟೋಫಿ ಪಡೆದುಕೊಂಡಿತು. ಮಾಳಿಂಗನಾಡು ತಂಡ ದ್ವಿತೀಯ ರೂ.3000 ನಗದು ಹಾಗೂ ಟೋಫಿ ಪಡೆದುಕೊಂಡಿತು.
ವಾಲಿಬಾಲ್ ಪಂದ್ಯಾಟದಲ್ಲಿ ಮಾಳಿಂಗನಾಡು ಶಬರಿಗಿರಿ ತಂಡ ರೂ.5000 ನಗದು ಹಾಗೂ ಟೋಫಿ ಪಡೆದುಕೊಂಡಿತು. ದ್ವಿತೀಯ ಬಹುಮಾನ ಜಾವಳಿ ಮಲೆಮನೆ ತಂಡ ರೂ.3000 ನಗದು ಹಾಗೂ ಟೋಫಿ ಪಡೆದುಕೊಂಡಿತು. ಕೆಸರುಗದ್ದೆ 100ಮೀ ಓಟದಲ್ಲಿ ಸೌರವ್ ಬಾಳೂರು ಪ್ರಥಮ ಸ್ಥಾನ ಪಡೆದು ರೂ.2000 ನಗದು ಬಹುಮಾನ ಪಡೆದರು. ದ್ವಿತೀಯ ರೂ.1000 ನಗದು ಬಹುಮಾನ ಮದನಶೆಟ್ಟಿ ಪಾಲಾಯಿತು. ಕೆಸರು ಗದ್ದೆ ಪ್ರಯುಕ್ತ ನಡೆದ ಲಾಟರಿಯಲ್ಲಿ ರೂ.5000 ನಗದು ಬಹುಮಾನ ಮೇಘನಾಥ ಮಾಳಿಂಗನಾಡು ಪಡೆದರು. ದ್ವಿತೀಯ ಬಹುಮಾನ ರೂ.3000 ಬಹುಮಾನ ಪೂರ್ಣೇಶ್ ಮಲೆಮನೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖಂಡರಾದ ನವೀನ್ ಹಾವಳಿ, ಬಿ.ಎಂ. ಭರತ್, ನಾಗೇಶ್ ಗೌಡ, ರಮೇಶ್ ಕೆಳಗೂರು, ಬ್ಯಾಂಡ್ ರವಿ, ಸುಂದರ ಹಡತಾಳು, ತನಿಯಪ್ಪ, ಸೋಮೇಶ್ ಮರ್ಕಲ್, ಎನ್.ಎಸ್. ಸುಧಾಕರ್, ಪರೀಕ್ಷಿತ್ ಜಾವಳಿ, ಆಟೋ ಸಂಘದ ಅಧ್ಯಕ್ಷ ಮಹೇಶ್, ಕೂವೆ ಚಂದ್ರು, ಉಮೇಶ್ ಮರ್ಕಲ್, ಮಹೇಶ್, ಬಿ.ಕೆ. ಸಂಜೀವ, ವಸಂತ ನಿಡುವಾಳೆ, ಜೀವನ್, ಸಂತೋಷ್ ಸಾಲಿಯಾನ್, ಮತ್ತಿತರರು ಇದ್ದರು.