ನಿಮ್ಮನ್ನು ಸಿಎಂ ಮಾಡಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ : ಡಿ.ಕೆ. ಶಿವಕುಮಾರ್…

407
firstsuddi

ಬೆಂಗಳೂರು : ಇಂದು ಸದನದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆ ಸಾಬೀತುಪಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಅವರು, ನಿಮ್ಮನ್ನು ಸಿಎಂ ಮಾಡಿದ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ. ನಿಮ್ಮನ್ನು ಸಿಎಂ ಮಾಡಿದ ಅನರ್ಹ ಶಾಸಕರ ಕೈ ಬಿಡಬೇಡಿ. ಅವರನ್ನು ತಬ್ಬಲಿ ಮಾಡಬೇಡಿ. ಅತೃಪ್ತ ಶಾಸಕರು ರಾಜೀನಾಮೆ ನೀಡಲು ಅವರಿಗೆ ಏನೆಲ್ಲಾ ಬೇಡಿಕೆ ಇಟ್ಟಿದ್ರೋ ಅದನ್ನೆಲ್ಲಾ ಕೊಡಿ. ಶಾಸಕರ ವಿಪ್‍ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳುತ್ತಿದ್ದರಲ್ಲ, ಈಗಾ ನೋಡಿ ಏನಾಯಿತು? ಈ ನಡುವೆ ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ ಎಂದು ವ್ಯಂಗ್ಯವಾಡಿದರು.