ಪಾಟ್ನಾ : ರೈಲ್ವೆ ಹಳಿ ದಾಟುತ್ತಿದ್ದ ಕಾರಿಗೆ ರೈಲು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದ ಪೊತಾಹಿ ನಡ್ವಾನ್ ಬಳಿ ನಡೆದಿದೆ. ಕಾರಿನ ಪ್ರಯಾಣಿಕರು ರೈಲು ಬರುತ್ತಿರುವ ಮುನ್ಸೂಚನೆಯಿದ್ದರೂ ನಿಯಮವನ್ನು ಪಾಲಿಸದೆ ಹಳಿ ಮೇಲೆ ವಾಹನವನ್ನು ಸಾಗಿಸುತ್ತಿದ್ದರು. ಈ ವೇಳೆ ಆಗಮಿಸಿದ ಪಾಟ್ನಾ-ರಾಂಚಿ ಜನಶತಾಬ್ದಿ ರೈಲು ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










