ನವದೆಹಲಿ : ನುಚ್ಚಕ್ಕಿ (ಒಡೆದ ಅಕ್ಕಿ) ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ನಿರ್ಬಂಧ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ.
ಬಾಸ್ಮತಿ ಅಲ್ಲದ ಅಕ್ಕಿಗಳ ಮೇಲೆ ಶೇ. 20ರಷ್ಟು ರಫ್ತು ಸುಂಕ ಹೆಚ್ಚಿಸಿದ್ದ ಸರ್ಕಾರ, ಇದೀಗ ಈ ನಿರ್ಧಾರ ಕೈಗೊಂಡಿದೆ. ನಿರ್ಬಂಧ ಆದೇಶ ಇಂದಿನಿಂದಲೂ ಜಾರಿಗೊಂಡಿದ್ದರೂ, ಹಡಗುಗಳಲ್ಲಿ ಈಗಾಗಲೇ ತುಂಬಿರುವ ನುಚ್ಚಕ್ಕಿ ರಫ್ತು ಸೆಪ್ಟೆಂಬರ್ 15ರವರೆಗೆ ರವಾನೆಯಾಗಲಿದೆ.
ದೇಶದ ಅನ್ನದಾತರು ಖಾರಿಫ್ ಬೆಳೆಗಳನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಾಗಿ ಬಿತ್ತನೆ ಮಾಡುತ್ತಾರೆ. ಇದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಸಲ ಜೂನ್ ತಿಂಗಳಲ್ಲಿ ಮಳೆ ಸರಿಯಾಗಿ ಬಾರದ ಕಾರಣ ಅನೇಕರು ಭತ್ತ ನಾಟಿ ಮಾಡಿಲ್ಲ. ಮೇ ತಿಂಗಳಲ್ಲಿ ಆಹಾರ ಭದ್ರತೆಗೆ ಅಪಾಯ ಕಂಡುಬರುವ ಸಾಧ್ಯತೆ ಇದೆ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ.










