ನೂಪುರ್ ಶರ್ಮಾ, ಓವೈಸಿ ಸೇರಿ ಇತರರ ವಿರುದ್ಧ ಪ್ರಕರಣ ದಾಖಲು…

60
firstsuddi

ನವದೆಹಲಿ : ದ್ವೇಷಪೂರಿತ ಭಾಷಣ, ಗುಂಪುಗಳಿಗೆ ಪ್ರಚೋದನೆ, ಸಮಾಜದ ಶಾಂತಿಯನ್ನು ಕದಡಿರುವ ಹಿನ್ನಲೆಯಲ್ಲಿ ನೂಪುರ್ ಶರ್ಮಾ, ಓವೈಸಿ ಸೇರಿ ಇತರರ ವಿರುದ್ಧ ದೆಹಲಿಯ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (ಐಎಫ್ ಎಸ್ ಒ) ಘಟಕದ ಪೊಲೀಸರು ಎರಡು ಪ್ರತ್ಯೇಕ ಎಫ್ ಐಆರ್ ಗಳನ್ನು ದಾಖಲಿಸಿದ್ದಾರೆ.

ನೂಪುರ್ ಶರ್ಮಾ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ನವೀನ್ ಜಿಂದಾಲ್, ಮೌಲನಾ ಮುಫ್ತಿ ನದೀಮ್, ಅಬ್ದುರ್ ರೆಹಮನ್, ಶಾಬಾದ್ ಚೌಹಾಣ್, ಗುಲ್ಜಾರ್ ಅನ್ಸಾರಿ, ಸ್ವಾಮಿ ಯತಿ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲಾಗಿದೆ.

‘ದ್ವೇಷ ಸಂದೇಶಗಳನ್ನು ಹರಡುವ, ವಿವಿಧ ಗುಂಪುಗಳನ್ನು ಪ್ರಚೋದಿಸುವ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸನ್ನಿವೇಶಗಳನ್ನು ಸೃಷ್ಟಿಸುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದೇವೆ. ಅಲ್ಲದೇ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮತ್ತು ತಪ್ಪು ಸಂದೇಶಗಳಿಗೆ ಉತ್ತೇಜನ ಕೊಡುವ ಮತ್ತು ಅವುಗಳನ್ನು ಹರಡುವ ಹಿಂದಿನ ಪಾತ್ರದ ಕುರಿತು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.