ತನ್ನನ್ನು ತಾನೇ ಮದುವೆಯಾದ ಯುವತಿ!

63
firstsuddi

ಗಾಂಧೀನಗರ : ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದ ಯುವತಿ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿಯೇ ಮದುವೆ ಮಾಡಿಕೊಂಡಿದ್ದಾರೆ.

ಗುಜರಾತ್ ನ ವಡೋದರಾದ 24 ವರ್ಷದ ಯುವತಿ ಕ್ಷಮಾ ಬಿಂದು ಕಳೆದ ಕೆಲ ದಿನಗಳ ಹಿಂದೆ ತನಗೆ ತಾನೇ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ವಡೋದರಾದ ಬಿಜೆಪಿ ಮೇಯರ್ ಸುನೀತಾ ಅವರ ಸಹೋದರಿ ಶುಕ್ಲಾ ಯಾವುದೇ ಕಾರಣಕ್ಕೂ ದೇವಸ್ಥಾನದಲ್ಲಿ ಸೆಲ್ಫ್ ಮ್ಯಾರೇಜ್ ನಡೆಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಯುವತಿ ಇಂದು ಮದುವೆ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದ ವೇಳೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ನಡೆದಿದೆ. ವಿವಾಹದ ನಂತರ, ಅವರು ವೀಡಿಯೊ ಸಂದೇಶದಲ್ಲಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ.

ಕ್ಷಮಾ ವಡೋದರಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೂನ್ 11ರಂದು ದೇವಸ್ಥಾನದಲ್ಲಿ ಸ್ವಯಂ ಮದುವೆ ಮಾಡಿಕೊಳ್ಳುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದರು. ವರನಿಲ್ಲದೆಯೇ ವಧು ಆಗಬೇಕು ಎಂಬ ಆಸೆ ಇತ್ತು. ಹೀಗಾಗಿ, ಸಂಪೂರ್ಣ ಜೀವನವನ್ನು ಏಕಾಂಗಿಯಾಗಿ ಕಳೆಯಲು ಬಯಸಿದ್ದೇನೆ. ಅದಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದೇನೆಂದು ಕ್ಷಮಾ ತಿಳಿಸಿದ್ದರು.