ನವದೆಹಲಿ : ಭಾರತದಲ್ಲಿ 12ರಿಂದ 17 ವರ್ಷದ ವಯೋಮಾನದವರಿಗೆ ಕೋವಿಡ್ 19 ಲಸಿಕೆಯ ಮೊದಲ ತುರ್ತು ಬಳಕೆಗೆ ನೊವಾವಾಕ್ಸ್ ಅನುಮತಿ ಪಡೆದಿದೆ. ನೊವಾವ್ಯಾಕ್ಸ್ ಕಂಪನಿಯ ಈ ಲಸಿಕೆಯನ್ನು ಭಾರತದಲ್ಲಿ ಸೆರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವಾವಾಕ್ಸ್ ಹೆಸರಿನಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ SARS-CoV-2 ನಿಂದ ಉಂಟಾಗುವ ಸೋಂಕನ್ನು ತಡೆಗಟ್ಟಲು ಇದರ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಕೊವಿಡ್-19 ಸೋಂಕಿನ ವಿರುದ್ಧ ತನ್ನ ಲಸಿಕೆ ಶೇ 80ರಷ್ಟು ಪರಿಣಾಮಕಾರಿ ಎಂದು ಕಳೆದ ವಾರ ನೊವಾವ್ಯಾಕ್ಸ್ ಹೇಳಿತ್ತು. ಈಗಾಗಲೇ ಇದರ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿದೆ.
ಮಕ್ಕಳಿಗೆ ನೀಡುವ ಉದ್ದೇಶದೊಂದಿಗೆ ಅಭಿವೃದ್ಧಿ ಪಡಿಸಿದ ಲಸಿಕೆಗಳ ಪೈಕಿ ನೊವಾವಾಕ್ಸ್ ಸೇರಿ 4 ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಬಯಲಾಜಿಕಲ್ ಇ ಕಂಪನಿಯ ಕೊರ್ಬಾವಾಕ್ಸ್, ಝೈಡಸ್ ಕೆಡಿಲಿಯಾ ಕಂಪನಿಯ ಝೈಕೊವ್-ಡಿ ಮತ್ತು ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಗಳಿಗೆ ಈಗಾಗಲೇ ಅನುಮತಿ ಸಿಕ್ಕಿದೆ.










