ನೋಟು ಅಮಾನ್ಯೀಕರಣದ ದಾಖಲೆ ಸಲ್ಲಿಸಲು ಕೇಂದ್ರ, ಆರ್​ಬಿಐಗೆ ಸೂಚನೆ ನೀಡಿ ತೀರ್ಪು ಕಾಯ್ದಿರಿಸಿದ ಸುಪ್ರೀಂ.

60
firstsuddi

ನವದೆಹಲಿ : ನೋಟು ಅಮಾನ್ಯೀಕರಣ ಮಾಡಿದ್ದರ ಬಗ್ಗೆ ದಾಖಲೆಗಳನ್ನು ನೀಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ)ಗೆ ನಿರ್ದೇಶನ ನೀಡಿ ತೀರ್ಪು ಕಾಯ್ದಿರಿಸಿದೆ.

ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಆರ್ ಬಿಐನ ವಕೀಲರು ಮತ್ತು ಹಿರಿಯ ವಕೀಲರಾದ ಪಿ ಚಿದಂಬರಂ ಹಾಗೂ ಶ್ಯಾಮ್ ದಿವಾನ್ ಅವರು ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದಾಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದರು.

2016ರಲ್ಲಿ ಕೇಂದ್ರ ಸರ್ಕಾರ 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ 58 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಗೊಂಡ ನ್ಯಾಯಮೂರ್ತಿ ಎಸ್ ಎ ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ, ತೀರ್ಪು ಕಾಯ್ದಿರಿಸಿದ್ದು, ಇದಕ್ಕೂ ಮೊದಲು ನೋಟ್‍ಬಂಧಿ ಮಾಡಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಕೇಂದ್ರ ಸರ್ಕಾರ ಮತ್ತು ಆರ್​ಬಿಐಗೆ ಸೂಚಿಸಿತು.