ನವದೆಹಲಿ : ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ಆರ್.ಹರಿ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
30 ತಿಂಗಳ ಅಧಿಕಾರಾವಧಿಯ ನಂತರ ಅಡ್ಮಿರಲ್ ಕೆಬಿ ಸಿಂಗ್ ಅವರು ಇಂದು ಸೇವೆಯಿಂದ ನಿವೃತ್ತರಾಗಿದ್ದು, ಆರ್. ಹರಿ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
1962ರ ಏಪ್ರಿಲ್ 12ರಂದು ಜನಿಸಿದ ಆರ್. ಹರಿ ಕುಮಾರ್ ಅವರು 1981ರ ಡಿಸೆಂಬರ್ ನಲ್ಲಿ ಎ-ಸ್ಕ್ವಾಡ್ರನ್, 61 ಕೋರ್ಸ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದರು ಮತ್ತು 1983ರ ಜನವರಿ 1ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡರು.
ಆರ್ ಹರಿ ಕುಮಾರ್ ಅವರು ಪಶ್ಚಿಮ ನೇವಲ್ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ (ಎಫ್ ಒಸಿ-ಇನ್-ಸಿ) ಫ್ಲಾಗ್ ಆಫೀಸರ್ ಆಗಿದ್ದರು. ಅಲ್ಲದೇ ಐಎನ್ಎಸ್ ವಿಕ್ರಮಾದಿತ್ಯದ ಸಾಗರೋತ್ತರ ಸಮಿತಿಯ ಮುಖ್ಯಸ್ಥರಾಗಿದ್ದರು ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನ ಕಮಾಂಡೆಂಟ್ ಆಗಿ ನೇಮಕಗೊಂಡ ಮೊದಲ ಫ್ಲ್ಯಾಗ್ ಆಫೀಸರ್ ಕೂಡ ಆಗಿದ್ದರು. ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಲಾಗಿದೆ.










