ನೌಕಾಪಡೆಯ ಮಿಗ್-29ಕೆ ವಿಮಾನ ಪತನ ; ಪೈಲಟ್ ಪ್ರಾಣಾಪಾಯದಿಂದ ಪಾರು…

57
firstsuddi

ಪಣಜಿ : ನೌಕಾಪಡೆಯ ಮಿಗ್-29ಕೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಗೋವಾ ಕರಾವಳಿಯಲ್ಲಿ ದಿನನಿತ್ಯದ ಹಾರಾಟದ ಸಮಯದಲ್ಲಿ ಪತನಗೊಂಡಿದೆ.

ವಿಮಾನವು ಹಾರಾಟ ನಡೆಸಿ ವಾಯುನೆಲೆಗೆ ಮರಳುತ್ತಿದ್ದಾಗ ಪತನಗೊಂಡಿದೆ. ಈ ವೇಳೆ ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದು, ತ್ವರಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೈಲಟ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಘಟನೆಯ ಹಿಂದಿನ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ.

ಮಿಗ್-29ಕೆ ವಿಮಾನವು ಅತ್ಯಾಧುನಿಕ, ವಾಯು ಪ್ರಾಬಲ್ಯದ ಫೈಟರ್ ಜೆಟ್ ಆಗಿದ್ದು, ಸುಮಾರು 2000 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 65,000 ಅಡಿಗಿಂತಲೂ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ.