ಹೈದರಾಬಾದ್ : ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಮೂವರು ಐಎಎಸ್ ಅಧಿಕಾರಿಗಳಿಗೆ ಒಂದು ತಿಂಗಳ ಜೈಲು ಶಿಕ್ಷೆ ಹಾಗೂ ತಲಾ 2,000 ರೂ. ದಂಡ ವಿಧಿಸಿ ಆಂಧ್ರಪ್ರದೇಶದ ಹೈಕೋರ್ಟ್ ನಿನ್ನೆ ತೀರ್ಪು ನೀಡಿದೆ.
ವಿಶೇಷ ಮುಖ್ಯ ಕಾರ್ಯದರ್ಶಿ (ಕೃಷಿ) ಪೂನಂ ಮಾಲಕೊಂಡಯ್ಯ, ಆಗಿನ ವಿಶೇಷ ಕೃಷಿ ಆಯುಕ್ತ ಹೆಚ್.ಅರುಣ್ ಕುಮಾರ್ ಮತ್ತು ಕರ್ನೂಲ್ನ ಆಗಿನ ಜಿಲ್ಲಾಧಿಕಾರಿ ಜಿ.ವೀರಪಾಂಡಿಯನ್ ವಿರುದ್ಧ ನ್ಯಾಯಮೂರ್ತಿ ಬಿ.ದೇವಾನಂದ್ ಅವರು ಆದೇಶ ಹೊರಡಿಸಿದ್ದು, ನ್ಯಾಯಾಲಯದ ಆದೇಶಗಳನ್ನು ಸಕಾಲದಲ್ಲಿ ಜಾರಿಗೊಳಿಸುವಲ್ಲಿ ಮೂವರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಧೀಶರು ಅಕ್ಟೋಬರ್ 2019 ರಲ್ಲಿ ಗ್ರಾಮ ಕೃಷಿ ಸಹಾಯಕ (ಗ್ರೇಡ್ -2) ಹುದ್ದೆಗೆ ಅರ್ಜಿದಾರರ ಉಮೇದುವಾರಿಕೆಯನ್ನು ಪರಿಗಣಿಸಲು ಮತ್ತು ಎರಡು ವಾರಗಳಲ್ಲಿ ಸೂಕ್ತ ಆದೇಶವನ್ನು ನೀಡುವಂತೆ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ವಿಫಲರಾದ ಸಂಬಂಧಿತ ಅಧಿಕಾರಿಗಳ ವಿರುದ್ಧ ಅರ್ಜಿದಾರರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.










