ನ್ಯೂಯಾರ್ಕ್‍ಗೆ ಬಂದಿಳಿದ ಪ್ರಧಾನಿ ಮೋದಿ ; ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನ ಉದ್ದೇಶಿಸಿ ಭಾಷಣ…

58
firstsuddi

ವಾಷಿಂಗ್ಟನ್ : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇದ್ರ ಮೋದಿಯವರು ನ್ಯೂಯಾರ್ಕ್ ಗೆ ಬಂದಿಳಿದಿದ್ದಾರೆ.

ಇಂದು ಸಂಜೆ 6.30ಕ್ಕೆ ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಿನ್ನೆ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಿಟ್ ನಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರು ಭಾಗವಹಿಸಿ, ಇಂಡೋ ಫೆಸಿಫಿಕ್ ನಲ್ಲಿ ಶಾಂತಿಸ್ಥಾಪನೆ, ಕೊವಿಡ್ 19 ವಿರುದ್ಧ ಹೋರಾಟ.ಇತ್ಯಾದಿ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಇಂದು ತಮ್ಮ ಅಮೆರಿಕ ಭೇಟಿಯನ್ನು ಮುಕ್ತಾಯಗೊಳಿಸಲಿರುವ ಪ್ರಧಾನಿ ಮೋದಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೊವಿಡ್- 19ನಿಂದ ಚೇತರಿಸಿಕೊಳ್ಳುವ ಆಶಯದೊಂದಿಗೆ ಸ್ಥಿತಿಸ್ಥಾಪಕತ್ವ ಸ್ಥಾಪನೆ, ಸುಸ್ಥಿರತೆ ಪುನರ್ನಿರ್ಮಾಣ, ಜಾಗತಿಕ ಅಗತ್ಯಗಳಿಗೆ ಸ್ಪಂದನೆ, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆಯ ಪುನರುಜ್ಜೀವನ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.