ಚಿಕ್ಕಮಗಳೂರು: ಎಸ್‍ಎಸ್‍ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರುವ ಗಂಗಾಮತ ಸಮುದಾಯದ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಂಗಾಮತ ಸಮಾಜ, ಬಾಗಲಕೋಟೆಯ ಕಲಾಭವನದಲ್ಲಿ ನ. 26ರಂದು ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದೇ ವೇಳೆ ಸಂಘ ನೂತನವಾಗಿ ರೂಪಿಸಿರುವ ಶ್ರೀ ಗಂಗಾ ವಿದ್ಯಾಸಿರಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಕೆ.ಎಂ. ಧನಂಜಯ ತಿಳಿಸಿದ್ದಾರೆ.
ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ, ಪರಮರಾಮಾರೂಡ ಸ್ವಾಮೀಜಿ, ಸಚಿವ ಮಂಕಾಳ ವೈದ್ಯ, ನಾಡೋಜ ಜಿ. ಶಂಕರ್ ಸೇರಿದಂತೆ ಸಮಾಜದ ಎಲ್ಲಾ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಗಂಗಾಮತ ಸಮಾಜದ ಬಾಂಧವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.










