ಚಂಡೀಗಢ : ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‍ನ ಜಲಂಧರ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನೀತು ಶುಟ್ಟರ್ನ್ ಸ್ಪರ್ಧಿಸಿದ್ದು, ಕೇವಲ 5 ಮತಗಳನ್ನು ಪಡೆದಿದ್ದು, ಫಲಿತಾಂಶ ಬಂದ ಬಳಿಕ ಕಣ್ಣೀರಾಕಿರುವ ಇವರು ನಮ್ಮ ಮನೆಯಲ್ಲೇ 9 ಮತಗಳಿದ್ದು, ನನಗೆ ನಮ್ಮ ಮನೆಯವರು ಮತ ಹಾಕಿಲ್ಲ ಎಂದು ಪತ್ರಕರ್ತರ ಎದುರು ಬೇಸರ ವ್ಯಕ್ತಪಡಿಸಿದ್ದು, ಈಗಾ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ.










