“ಪಕ್ಕೆಲುಬು” ವೀಡಿಯೋ ಬಳಿಕ “ನಪುಂಸಕ ಲಿಂಗ” ವೀಡಿಯೋ ವೈರಲ್…

919
firstsuddi

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಶಿಕ್ಷಕರೊಬ್ಬರು ಪಕ್ಕೆಲುಬು ಎಂಬ ಪದವನ್ನು ವಿದ್ಯಾರ್ಥಿಗೆ ಹೇಳಿಕೊಡುವ ವೀಡೀಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅಲ್ಲದೇ ಆ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವೀಡಿಯೋ ಮಾಡಿ ಹರಿಬ್ಬಿಟ್ಟಿದ್ದ ಶಿಕ್ಷಕರನ್ನು ಅಮಾನತು ಮಾಡಿದ್ದರು. ಈ ಘಟನೆಯಿಂದ ಹೊರಬರುವ ಮುನ್ನವೇ ಇಂತಹದ್ದೇ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿ ಬಳಿ ನಪುಂಸಕ ಲಿಂಗ ಎಂದು ಉಚ್ಛರಿಸುವಂತೆ ಹೇಳಿ ಅವಮಾನಿಸುವ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಸದ್ಯ ಆ ಶಾಲೆ ಯಾವುದು, ಯಾವ ಜಿಲ್ಲೆ ಎಂಬುವುದು ಇನ್ನು ತಿಳಿದು ಬಂದಿಲ್ಲ.