ಜೈಪುರ್ : ರಾಜಸ್ಥಾನ ಮೂಲದ ದಂಪತಿ ತಮ್ಮ ಮಗುವಿಗೆ ಕಾಂಗ್ರೆಸ್ ಎಂದು ನಾಮಕರಣ ಮಾಡುವ ಮೂಲಕ ಪಕ್ಷದ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಕಚೇರಿಯಲ್ಲಿ ಮೀಡಿಯಾ ಆಫಿಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಜೈನ್ ಎಂಬುವವರು ತಮ್ಮ ಮಗುವಿಗೆ “ಕಾಂಗ್ರೆಸ್ ಜೈನ್” ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್ ಜೈನ್ ಅವರು, ನನ್ನ ಇಡೀ ಕುಟುಂಬ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದೆ. ನನ್ನ ಮಗ ಕೂಡಾ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಗುರುತಿಸಿಕೊಳ್ಳಲಿ ಎಂಬುವುದು ನನ್ನ ಆಶಯ. ಹೀಗಾಗಿ ನಾನು ಮಗನಿಗೆ “ಕಾಂಗ್ರೆಸ್ ಜೈನ್” ಎಂದು ನಾಮಕರಣ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.










