ಪಕ್ಷಬೇಧ ಮರೆತು ಗ್ರಾಮಾಭಿವೃದ್ದಿಗೆ ಶ್ರಮಿಸಿ : ಮೋಟಮ್ಮ.

89
firstsuddi

ಕೊಟ್ಟಿಗೆಹಾರ : ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರಿಂದ ನಾಮ ಪತ್ರ ಸಲ್ಲಿಕೆಯಾಗಿತ್ತು. ಅವರಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಲೀಲಾವತಿ, ಉಪಾಧ್ಯಕ್ಷರಾಗಿ ಇರ್ಫಾನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಇಇ ಮಂಜುನಾಥ್ ಘೋಷಿಸಿದರು.

ಬಳಿಕ ನಡೆದ ಸನ್ಮಾನ ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ‘ಜನರ ಸೇವೆ ಮಾಡಲು ಅವಕಾಶ ಸಿಕ್ಕಿದಾಗ ಅದನ್ನು ಪ್ರಾಮಾಣಿಕವಾಗಿ ಮಾಡಿ ಗ್ರಾಮಾಭಿವೃದ್ದಿಗೆ ಶ್ರಮಿಸಿ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಹೆಚ್ಚಸಬೇಕು. ಆರಿಸಿ ಬಂದ ಮೇಲೆ ಪಕ್ಷಬೇಧ ಮರೆತು ಆಧ್ಯತೆ ಮೇರೆಗೆ ಗ್ರಾಮದ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿ’ ಎಂದರು.

ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ ‘ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜನರು ಮೆಚ್ಚಿ ಚುನಾಯಿಸಿದ್ದಾರೆ. ಅಧಿಕಾರವಧಿಯಲ್ಲಿ ಜನರಿಗೆ ಉತ್ತಮವಾಗಿ ಸ್ಪಂಧಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭ್ರಷ್ಟಾಚಾರ ರಹಿತ ಸೇವೆ ನೀಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಪದಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಮುಂದೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಜನರು ಕೈ ಹಿಡಿಯುವಂತಾಗಬೇಕು. ನಮ್ಮ ಪಕ್ಷದ ವರಿಷ್ಟರ ಸಹಕಾರ ಸದಾ ನಿಮಗೆ ಇರುತ್ತದೆ’ಎಂದರು.

ಮುಖಂಡ ಬಿ.ಸಿ ಪ್ರವೀಣ್ ಮಾತನಾಡಿ ‘ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಈ ಬಾರಿ ಅಧಿಕಾರಕ್ಕೆ ತಂದಿದ್ದೇವೆ. ಸಮಾಜದಲ್ಲಿ ಪ್ರಾಮಾಣಿಕ ಕೆಲಸ ಮಾಡಿ ಕಳಂಕರಹಿತ ಆಡಳಿತ ನೀಡಬೇಕು. ಗ್ರಾಮದಲ್ಲಿ ಆಗದೇ ಇರುವ ಕೆಲಸವನ್ನು ನಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಮುಗಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷೆ ಲೀಲಾವತಿ ಹಾಗೂ ಉಪಾಧ್ಯಕ್ಷ ಇರ್ಫಾನ್ ಅವರನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೂವಿನ ಹಾರ ಹಾಕಿ ಗೌರವಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಸುದೀರ್ ಗೌಡ, ತಾಲ್ಲೂಕು ಕಾಂಗ್ರೆಸ್ ಉಪಾಧ್ಯಕ್ಷ ಪ್ರಭಾಕರ್ ಬಿನ್ನಡಿ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಸಂಪತ್ ಕುಮಾರ್,ಜಿಲ್ಲಾ ಅಲ್ಪಸಂಖ್ಯಾತ ಉಪಾಧ್ಯಕ್ಷ ಮೆಲ್ವಿನ್ ಲಸ್ರಾದೊ, ಕಾಂಗ್ರೆಸ್ ಅಲ್ಪಸಂಖ್ಯಾತ ಹೋಬಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಬಣಕಲ್ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಟಿ.ಎಂ.ಸುಬ್ರಮಣ್ಯ, ಸಬ್ಲಿ ದೇವರಾಜ್, ಅಹಮ್ಮದ್ ಬಾವಾ, ರಾಮಚಂದ್ರ, ಟಿ.ಎ.ಖಾದರ್, ವಿನ್ಸೆಂಟ್ ಲೋಬೊ, ಬಿ.ಶಿವರಾಮಶೆಟ್ಟಿ, ಬಿ.ಎಂ.ಆದರ್ಶ್, ಗೋಪಾಲಾಚಾರ್, ಕಿರಣ್, ರುದ್ರಯ್ಯ, ಮಂಜಯ್ಯ, ಅಜೀಜ್, ಬಿ.ಎಸ್.ವಿಕ್ರಂ, ಇದ್ದರು.