ಪತಿಯ ಎದುರಲ್ಲೇ ಬೇರೇ ನಟನ ಜೊತೆ ಕಿಸ್ ಮಾಡಿದ ಪ್ರಿಯಾಂಕಾ.

88
firstsuddi

ನಟಿ ಪ್ರಿಯಾಂಕಾ ಚೋಪ್ರಾ ಅವರು ಸಖತ್ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ‘ಸಿಟಾಡೆಲ್’ ವೆಬ್ ಸರಣಿಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ‘ಲವ್ ಅಗೇನ್’ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ.

‘ಲವ್ ಅಗೇನ್’ ಟೈಟಲ್‌ಗೆ ತಕ್ಕಂತೆಯೇ ಪ್ರಿಯಾಂಕಾ ಅವರಿಗೆ ಮತ್ತೆ ಲವ್ ಆಗಿದೆಯಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ. ಏಕೆಂದರೆ, ಪತಿಯ ಮುಂದೆಯೇ ಪ್ರಿಯಾಂಕಾ ಚೋಪ್ರಾ ಬೇರೇ ನಟನಿಗೆ ಸಿಹಿಮುತ್ತು ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

‘ಲವ್ ಅಗೇನ್’ ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್ ಶೋ ಇತ್ತೀಚೆಗೆ ನಡೆಯಿತು. ನ್ಯೂಯಾರ್ಕ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಸ್ಯಾಮ್ ಹ್ಯೂವನ್ ಜೊತೆ ನಿಕ್ ಜೋನಸ್ ಕೂಡ ಭಾಗಿ ಆಗಿದ್ದರು. ಈ ವೇಳೆ ಪ್ರಿಯಾಂಕಾ ಅವರ ಮೂಗಿಗೆ ಸ್ಯಾಮ್ ಹ್ಯೂವನ್ ಅವರು ಕಿಸ್ ಮಾಡಿದ್ದಾರೆ.

ಮೇ 5ರಂದು ‘ಲವ್ ಅಗೇನ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ನಿಕ್ ಜೋನಸ್ ಕೂಡ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಸ್ಯಾಮ್ ಹ್ಯೂವನ್ ಅವರ ಜೋಡಿ ಚೆನ್ನಾಗಿ ಬಂದಿದೆ. ಟ್ರೈಲರ್ ಝಲಕ್‌ಗೆ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.