ಪತ್ನಿಗೆ ಕ್ರಿಮಿನಾಶಕ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ ಪತಿ…!

1168
firstsuddi

ರಾಮನಗರ : ಕೌಟುಂಭಿಕ ಕಲಹ ಹಿನ್ನಲೆ ಪತ್ನಿಗೆ ಕ್ರಿಮಿನಾಶಕ ಇಂಜೆಕ್ಷನ್ ನೀಡಿ ಪತಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹನುಮಂತನಗರದಲ್ಲಿ ನಡೆದಿದೆ. ದೀಪಾ(24) ಮೃತ ದುರ್ದೈವಿ ಹಾಗೂ ವೆಂಕಟೇಶ್(30) ಕೃತ್ಯವೆಸಗಿದ ಪತಿ ಎಂದು ಗುರುತಿಸಲಾಗಿದ್ದು, ಆರೋಪಿ ವೆಂಕಟೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, ಕಳೆದ 11 ತಿಂಗಳ ಹಿಂದೆಯಷ್ಟೇ ಹಿರಿಯರ ಸಮ್ಮುಖದಲ್ಲಿ ಇಬ್ಬರು ವಿವಾಹವಾಗಿದ್ದರು. ಆದರೆ ವೆಂಕಟೇಶ್ ಅವರು ಮದುವೆಯಾದಗಿಂದಲೂ ದೀಪಾ ಅವರೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದರು ಎನ್ನಲಾಗಿದ್ದು, ಎಂದಿನಂತೆ ನಿನ್ನೆ ರಾತ್ರಿಯೂ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಪತಿ ವೆಂಕಟೇಶ್ ಪತ್ನಿಗೆ ತಿಳಿಯದೇ ಕ್ರಿಮಿನಾಶಕ ಇಂಜೆಕ್ಷನ್ ನೀಡಿದ್ದು, ಅಲ್ಲದೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಐಜೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.