ಪತ್ನಿಗೆ ಪ್ರತಿದಿನ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಪತಿ!

102
firstsuddi

ಪ್ಯಾರಿಸ್: ಫ್ರಾನ್ಸ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ತನ್ನ ಪತ್ನಿಗೆ ಪ್ರತಿದಿನ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದು 10 ವರ್ಷಗಳ ಕಾಲ ಮುಂದುವರಿದಿದ್ದು, 92 ಅತ್ಯಾಚಾರ ಪ್ರಕರಣವನ್ನ ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ರಿಂದ 53 ವರ್ಷದೊಳಗಿನ 59 ಪುರುಷರನ್ನ ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಅವರಲ್ಲಿ ಅಗ್ನಿಶಾಮಕ ಸಿಬ್ಬಂದಿ, ಲಾರಿ ಚಾಲಕ, ಪಾಲಿಕೆ ಕೌನ್ಸಿಲರ್, ಬ್ಯಾಂಕ್‌ನಲ್ಲಿ ಐಟಿ ಉದ್ಯೋಗಿ, ಜೈಲು ಸಿಬ್ಬಂದಿ, ನರ್ಸ್ ಮತ್ತು ಪತ್ರಕರ್ತರೂ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆರೋಪಿ ಪತಿಯನ್ನು ಫ್ರಾನ್ಸ್‌ನ ಡೊಮಿನಿಕ್ ಪಿ ಎಂದು ಗುರುತಿಸಲಾಗಿದ್ದು, ಇವರಿಗೆ ಮದುವೆಯಾಗಿ 50 ವರ್ಷ ಕಳೆದಿದ್ದು, ದಂಪತಿಗೆ 3 ಮಕ್ಕಳಿದ್ದಾರೆ. ಪತಿ ಡೊಮಿನಿಕ್, ಪ್ರತಿದಿನ ರಾತ್ರಿ ಹೆಂಡತಿಗೆ ಊಟದಲ್ಲಿ ಲೊರಾಜೆಪಮ್ ಆಂಟಿ-ಆಂಗ್ಲೇಶನ್ ಡ್ರಗ್ ಬೆರಸಿಕೊಡುತ್ತಿದ್ದ. ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಬೇರೆ ಪುರುಷರನ್ನ ತನ್ನ ಮನೆಗೆ ಕರೆಸಿ ಹೆಂಡತಿ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದ. ಅದನ್ನು ತಾನೇ ವೀಡಿಯೋನಲ್ಲಿ ರೆಕಾರ್ಡ್ ಮಾಡಿಕೊಂಡು ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ. 2011ರಿಂದ 2020ರ ಅವಧಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ತನಿಖಾಧಿಕಾರಿಗಳ ಪ್ರಕಾರ, ಪತಿ ಡೊಮಿನಿಕ್ ತನ್ನ ಹೆಂಡತಿ ಬೇಗನೆ ಎಚ್ಚರವಾಗದಂತೆ ನೋಡಿಕೊಳ್ಳಲು ಬರುವವರಿಗೆ ತಂಬಾಕು ಹಾಗೂ ಪರ್ಫ್ಯೂಮ್ ಬಳಸಬೇಡಿ ಅಂತಾ ಹೇಳಿದ್ದ. ತಕ್ಷಣ ತಾಪಮಾನ ಬದಲಾವಣೆ ತಪ್ಪಿಸಲು ಬಿಸಿನೀರಿನಲ್ಲಿ ಕೈತೊಳೆಯುವಂತೆ ಬರುವವರಿಗೆ ಹೇಳ್ತಿದ್ದ. ಅಡುಗೆ ಮನೆಯಲ್ಲಿ, ಸ್ನಾನಗೃಹದಲ್ಲಿ ಬಟ್ಟೆ ಬಿಚ್ಚಿಡುವುದನ್ನ ತಪ್ಪಿಸಿದ್ದ. ವಾಹನಗಳನ್ನು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ವಾಹನಗಳನ್ನು ನಿಲ್ಲಿಸುವಂತೆ ನೋಡಿಕೊಳ್ಳುತ್ತಿದ್ದ. ಸ್ಥಳೀಯರಿಗೆ ಅನುಮಾನ ಬರಬಾರದು ಅಂತಾ ಕತ್ತಲಲ್ಲೇ ಈ ಕೆಲಸ ಮಾಡಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಅತ್ಯಾಚಾರ ಮಾಡಿರುವ ಕೆಲವರು, ಅವನ ಹೆಂಡತಿಗೆ ಇದು ಒಪ್ಪಿಗೆ ಇರಲಿಲ್ಲ ಅನ್ನೋ ವಿಷಯ ನಮಗೆ ಗೊತ್ತಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ಅವನ ಹೆಂಡತಿ, ಅವಳನ್ನ ಇಷ್ಟಪಡುವವನೊಂದಿಗೆ ಮಾಡಿದ್ರೆ ತಪ್ಪಿಲ್ಲ ಎಂದು ಹೇಳಿದ್ದಾರೆ.

ತನಿಖೆ ಸಂದರ್ಭದಲ್ಲಿ ಡೊಮಿನಿಕ್ ಅತ್ಯಾಚಾರ ವೀಡಿಯೋ ಮಾಡಿರುವ ಬಗ್ಗೆ ತಿಳಿದುಕೊಂಡರು. ಜೊತೆಗೆ ಬಟ್ಟೆ ಬದಲಾಯಿಸುತ್ತಿದ್ದ ಕೋಣೆಗಳಲ್ಲೂ ಸೀಕ್ರೆಟ್ ಕ್ಯಾಮೆರಾಗಳನ್ನಿಟ್ಟು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ. ಈ ಬಗ್ಗೆ ಮಹಿಳೆಗೆ ತಿಳಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ವರದಿಯಾಗಿದೆ.