ಪತ್ನಿಯನ್ನು ಕೊಂದು ಮೃತದೇಹವನ್ನು 12 ತುಂಡುಗಳಾಗಿ ಕತ್ತರಿಸಿದ ಪತಿ…

275
firstsuddi

ನವದೆಹಲಿ : ಪತಿ ತನ್ನ ಪತ್ನಿಯನ್ನು ಕೊಂದು ಮೃತದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿರುವ ಘಟನೆ ದೆಹಲಿಯ ಪ್ರೇಮ್ ನಗರದಲ್ಲಿ ನಡೆದಿದೆ. ರೋಹಿಣಿ ಕೊಲೆಯಾದ ಪತ್ನಿ ಎಂದು ಗುರುತಿಸಲಾಗಿದ್ದು, ಪತಿ ರಜನಿ ತನ್ನ ಪತ್ನಿಗೆ ಬೇರೊಂದು ಅನೈತಿಕ ಸಂಬಂಧ ಇದೆ ಎಂದು ಯಾವಾಗಲೂ ಅನುಮಾನಿಸುತ್ತಿದ್ದರು. ಇದೇ ವಿಚಾರವಾಗಿ ರೋಹಿಣಿ ಹಾಗೂ ಪತಿ ರಜನಿ ಪದೇ ಪದೇ ಯಾವಾಗಲೂ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ಶನಿವಾರ ರಾತ್ರಿ ಜಗಳವಾಡುತ್ತಿದ್ದ ವೇಳೆ ಜಗಳ ತಾರಕಕ್ಕೇರಿ ಪತಿ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಮೃತದೇಹವನ್ನು 12 ತುಂಡುಗಳನ್ನಾಗಿ ಕತ್ತರಿಸಿದ್ದಾರೆ. ಅಲ್ಲದೇ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.