ವಿಶ್ವನಾಥ್ ಅತೃಪ್ತ ಪ್ರೇತಾತ್ಮ: ಸಾ.ರಾ. ಮಹೇಶ್ ಕಿಡಿ…

1077
firstsuddi

ಮೈಸೂರು : ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾ.ರಾ. ಮಹೇಶ್ ಅವರು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ಅವರು ತಾವು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ವಿರುದ್ಧ ತೇಜೋವಧೆ ಮಾಡುತ್ತಿದ್ದಾರೆ. ಈ ಬಗ್ಗೆ ವಿಶ್ವನಾಥ್ ಅವರು ಬಹಿರಂಗವಾಗಿ ಕ್ಷಮೆ ಕೋರಬೇಕು. ನನ್ನದೇನಾದರೂ ತಪ್ಪಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಶ್ರದ್ದೆ ಹಾಗೂ ಕರ್ತವ್ಯಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದೆ. ಅದೇ ರೀತಿ ವಿಶ್ವನಾಥ್ ಅವರು ಸಹ ಪ್ರಮಾಣ ಮಾಡಿದ್ದರು. ವಿಶ್ವನಾಥ್ ಅವರು ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಬನ್ನಿ ಚಾಮುಂಡಿ ಬೆಟ್ಟಕ್ಕೆ, ನಾನು ಯಾವುದೇ ಆಸೆ, ಆಮಿಷಗಳಿಗೂ ಬಲಿಯಾಗಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ ಎಂದು ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲ್ ಹಾಕಿದರು. ಯಾವ ಹೀರೋಯಿನ್ ಜೊತೆ ಹೇಗೆ ಮಾತನಾಡಿದ್ದೀರಿ ಎಂಬ ದಾಖಲೆ ಇದೆ. ನಿಮ್ಮ ಹಾಗೆ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿಕೊಂಡು ಹೋಗುತ್ತೀರಾ. ನಾನು ನಿಮಗಿಂತ ಏಕವಚನದಲ್ಲಿ ಮಾತನಾಡಬಲ್ಲೆ. ಆದರೆ ನನ್ನ ತಂದೆ ನನಗೆ ಸಂಸ್ಕಾರ ಕಲಿಸಿದ್ದಾರೆ. ಹೀಗಾಗಿ ಮಾತನಾಡುವುದಿಲ್ಲ. ಚಾಮುಂಡಿ ಬೆಟ್ಟದಲ್ಲಿ ಬಂದು ಪ್ರಮಾಣ ಮಾಡಿ ಆಗಾ ನಾನಾ ಅಯೋಗ್ಯ, ನೀವಾ ಅಯೋಗ್ಯ ಎಂಬುವುದು ಸಾಬೀತಾಗುತ್ತದೆ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನನ್ನ ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕಿಡಿಕಾರಿದರು. ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಹೆಚ್. ವಿಶ್ವನಾಥ್ ಅವರು ನಾನು ಬ್ಲೂ ಫಿಲಂ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡವನಲ್ಲ. ಯಾರದ್ದೋ ಮನೆಯ ಲೋಟ ತೊಳೆದಿಲ್ಲ. ರಾಮದಾಸ್ ಮನೆ ಚಡ್ಡಿ ತೊಳೆದಿಲ್ಲ. ನಮ್ಮ ತಂದೆ ಆ ಕಾಲದಿಂದಲೂ ಜಮೀನ್ದಾರರು. ಆ ಕಾಲದಲ್ಲೇ ಕುರುಬ ಸಮಾಜಕ್ಕೆ ಜಮೀನು ಕೊಟ್ಟ ವಂಶ ನಮ್ಮದು. ನಾನು ದಿನದ ಖರ್ಚಿಗಾಗಿ ಯಾರನ್ನೂ ಕೇಳುವುದಿಲ್ಲ. ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಸಾ.ರಾ ಮಹೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.