ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆದ ಪತಿ!

63
firstsuddi

ಬೆಂಗಳೂರು : ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಸ್ನೇಹಿತರೊಂದಿಗೆ ಬಲವಂತವಾಗಿ ಮಲಗಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಹೇಯ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಸಂಪಿಗೆಹಳ್ಳಿ ನಿವಾಸಿ ಜಾನ್ ಪಾಲ್ ಎಂಬಾತ 2011ರಲ್ಲಿ ಮಹಿಳಾ ಟೆಕ್ಕಿಯೊಬ್ಬಳನ್ನು ಮದುವೆಯಾಗಿದ್ದಾನೆ. ಆರಂಭದಲ್ಲಿ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದ ಜಾನ್ ಪಾಲ್, ಮದುವೆಯಾದ ಮೂರ್ನಾಲ್ಕು ವರ್ಷಕ್ಕೆ ಹೇಯ ಕೃತ್ಯ ಎಸಗಲು ಆರಂಭಿಸಿದ್ದಾನೆ. ಪಾರ್ಟಿಗೆಂದು ಸ್ನೇಹಿತರನ್ನು ಮನೆಗೆ ಕರೆಸಿ ಅವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಒತ್ತಾಯಿಸಲು ಆರಂಭಿಸಿದ್ದಾನೆ. ಪತಿಯ ಹೇಯ ನಡೆಗೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಪತಿ ಜಾನ್ ಪಾಲ್ ಪತ್ನಿ ಮೇಲೆ ಹಲ್ಲೆ ನಡೆಸಿ ಬಲವಂತ ಮಾಡಿದ್ದಾನೆ.

ಪತಿಯ ಏಟನ್ನು ತಾಳಲಾಗದೆ ಮನೆಗೆ ಬರುತ್ತಿದ್ದ ಗೆಳೆಯರೊಂದಿಗೆ ದೈಹಿಕ ಸಂಪರ್ಕ ನಡೆಸಲು ಪತ್ನಿ ಒಪ್ಪಿದ್ದಾಳೆ. ಅದರಂತೆ ಪಾರ್ಟಿಗಾಗಿ ಮನೆಗೆ ಬಂದಿದ್ದ ಸ್ನೇಹಿತರ ಜೊತೆ ಜಾನ್ ಪಾಲ್ ತನ್ನ ಪತ್ನಿಯನ್ನು ಮಲಗಿಸಿದ್ದಾನೆ. ದೈಹಿಕ ಸಂಪರ್ಕದ ಪೊಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಪಾಪಿಷ್ಟ ಪತ್ನಿಯ ತಂಗಿಯನ್ನು ತನ್ನೊಡನೆ ಮಲಗುವಂತೆ ಕಿರುಕುಳ ನೀಡಲು ಆರಂಭಿಸಿದ್ದಾನೆ.

ಗಂಡನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಪತ್ನಿ ಪತಿಗೆ ವಿಚ್ಚೇಧನ ನೀಡಲು ಮುಂದಾಗಿದ್ದಾಳೆ. ಈ ವೇಳೆ ಪತ್ನಿ ತನ್ನ ಗೆಳೆಯರೊಂದಿಗಿನ ಅಶ್ಲೀಲ ಪೊಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಕೊನೆಗೆ ಪತಿಯ ವಿರುದ್ಧ ಪತ್ನಿ ಠಾಣೆ ಮೆಟ್ಟಿಲೇರಿ ಪತಿಯ ಹೇಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ.

ಅಲ್ಲದೆ ಆತನೊಬ್ಬ ಗಾಂಜಾ ವ್ಯಸನಿಯಾಗಿದ್ದು, ಮನೆಯಲ್ಲಿಯೇ ಗಾಂಜಾ ಸಸಿಗಳನ್ನ ಫಾಟ್ ಗಳಲ್ಲಿ ಬೆಳೆದಿದ್ದಾನೆ ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ಲೈಂಗಿಕ ಕಿರುಕುಳ, ಎನ್ ಡಿಪಿಎಸ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.