ಪತ್ನಿಯ ಪರಸಂಗ ಪ್ರೀತಿ : ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ..!

157
First Suddi

ಮಧ್ಯಪ್ರದೇಶ : ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‍ನ ಬಾಲಂಪುರ ಗ್ರಾಮದಲ್ಲಿ ನಡೆದಿದೆ.

ಎರಡು ತಿಂಗಳ ಹಿಂದೆ ರಾಜ್‍ಪಾಲ್ ಅವರ ಪತ್ನಿ ಕುಟುಂಬವನ್ನು ತೊರೆದು ಬೇರೆ ವ್ಯಕ್ತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು, ಇದೇ ಕಾರಣಕ್ಕೆ ರಾಜ್‍ಪಾಲ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ತಕ್ಷಣವೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಂದೆ ರಾಜ್‍ಪಾಲ್ ಹಾಗೂ 4 ವರ್ಷದ ಕಂದಮ್ಮ ಮೃತಪಟ್ಟಿದ್ದಾರೆ.  7 ವರ್ಷದ ಮಗ ಬದುಕುಳಿದಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.