ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ ನೇಮಕ ; ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ…

60
firstsuddi

ಬೆಂಗಳೂರು : ಸಾಲುಮರದ ತಿಮ್ಮಕ್ಕನವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವುದರ ಜೊತೆಗೆ ರಾಜ್ಯ ಸಂಪುಟ ದರ್ಜೆಯ ಸ್ಥಾನಮಾನ ಕೂಡ ನೀಡಿದೆ.

ಸಾಲುಮರದ ತಿಮ್ಮಕ್ಕರಿಗೆ ಪರಿಸರದ ರಾಯಭಾರಿ ಹಾಗೂ ರಾಜ್ಯ ಸಚಿವ ಸಂಪುಟ ಸ್ಥಾನಮಾನ ನೀಡುವುದಾಗಿ ಕಳೆದ ತಿಂಗಳು ಸಿಎಂ ಬೊಮ್ಮಾಯಿ ಘೋಷಿಸಿದ್ದರು. ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.