ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯ ಅಪಹರಣ…

40
firstsuddi

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಿವಾಸಿಯಾಗಿರುವ ಬಾಲಕಿಯನ್ನು ವಾರದ ಹಿಂದೆ ಅಪಹರಿಸಲಾಗಿದ್ದು, ಈ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಅಲ್ಲಿನ ಸರ್ಕಾರ ಬಾಲಕಿಯ ಪತ್ತೆಗಾಗಿ ಉನ್ನತ ಮಟ್ಟದ ತನಿಖೆ ನಡೆಸಲು ಸೂಚಿಸಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿದೆ. ಸೆ.24ರಂದು ಮೀನಾ ಮೇಘವಾರ್ ಎಂಬ 14 ವರ್ಷದ ಬಾಲಕಿಯನ್ನು ನಾಸರ್ ಪುರ ಪ್ರದೇಶದಿಂದ ಅಪಹರಿಸಲಾಯಿತು. ಹಾಗೂ ಮಿರ್ಪುರ್ಖಾಸ್ ಪಟ್ಟಣದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮತ್ತೊಬ್ಬ ಹಿಂದೂ ಹುಡುಗಿಯನ್ನು ಅಪಹರಿಸಲಾಗಿತ್ತು.

ಇತ್ತೀಚೆಗಷ್ಟೇ ರಕ್ಷಿಸಲ್ಪಟ್ಟ ಬಾಲಕಿಯೊಬ್ಬಳನ್ನು ಮದುವೆಯಾದ ಮುಸ್ಲಿಂ ವ್ಯಕ್ತಿ ಅಪಹರಿಸಿದ್ದಲ್ಲದೇ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದ. ಈ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಮತ್ತೊಂದು ಘಟನೆಯಲ್ಲಿ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಹಿಂದೂ ಹುಡುಗಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.