ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು `ಜಾಗತಿಕ ಉಗ್ರ’ರ ಪಟ್ಟಿಗೆ ಸೇರಿಸಿದೆ.
ಲಷ್ಕರ್-ಎ-ತೈಬಾ ಸಂಘಟನೆಯ ನಾಯಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸಲು ಭಾರತ ಸರ್ಕಾರವು ಹಲವು ಬಾರಿ ಪ್ರಯತ್ನ ಪಟ್ಟಿತ್ತು. ಜೂನ್ 2022ರಲ್ಲಿ ತನ್ನ ಪ್ರಯತ್ನಕ್ಕೆ ಚೀನಾ ಅಡ್ಡಿಯಾಗಿದೆ ಎಂದು ಭಾರತವು ದೂರಿತ್ತು.
2023ರ ಜನವರಿ 16ರಂದು ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ISIL (ದಯಶ್) ನಿರ್ಣಯಗಳಿಗೆ ಸಂಬಂಧಿಸಿ, ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅನುಮೋದಿಸಿತು.
ಅಬ್ದುಲ್ ರೆಹಮಾನ್ ಮಕ್ಕಿಯು ಲಷ್ಕರ್-ಎ-ತೈಬಾ ಸಂಘಟನೆಯ ಮುಖ್ಯಸ್ಥ ಮತ್ತು ಮುಂಬೈ ದಾಳಿಯ (26/11) ಸೂತ್ರಧಾರ ಹಫೀಜ್ ಸಯೀದ್ ನ ಸೋದರ. ಲಷ್ಕರ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಇವನು ವಿವಿಧ ಹಂತಗಳಲ್ಲಿ ನಾಯಕತ್ವ ನಿರ್ವಹಿಸುತ್ತಿದ್ದ. 2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮಕ್ಕಿಯನ್ನು ಉಗ್ರಗಾಮಿ ಎಂದು ಘೋಷಿಸಿ ಶಿಕ್ಷೆ ವಿಧಿಸಿತ್ತು.










